-->
ನಟಿ ರಶ್ಮಿಕಾ ಮಂದಣ್ಣ ಅವರ ಬೆಂಬಲಕ್ಕೆ ನಿಂತ್ರ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ...!??

ನಟಿ ರಶ್ಮಿಕಾ ಮಂದಣ್ಣ ಅವರ ಬೆಂಬಲಕ್ಕೆ ನಿಂತ್ರ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ...!?? ಕೆಲ ದಿನಗಳ ಹಿಂದೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಮಂದಣ್ಣ ಈ ರೀತಿಯಾಗಿ ತಮ್ಮ ಮನದ ನೋವನ್ನು ಹೇಳಿಕೊಂಡಿದ್ದರು "ಕಳೆದ ಕೆಲವು ಸಮಯದಿಂದ ಕೆಲವು ವಿಷಯಗಳು ನನ್ನನ್ನು ಕಾಡುತ್ತಿವೆ. ಅದರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ, ಬಹಳಷ್ಟು ದ್ವೇಷವನ್ನು ಎದುರಿಸುತ್ತಿದ್ದೇನೆ. ನನ್ನ ಈ ಟಿಪ್ಪಣಿ ನಿಜವಾಗಿಯೂ ಬಹಳಷ್ಟು ಟ್ರೋಲ್‌ಗಳು ಮತ್ತು ನಕಾರಾತ್ಮಕತೆಗೆ ಪಂಚಿಂಗ್ ಬ್ಯಾಗ್ ಆಗಿದೆ" ಎಂದು ರಶ್ಮಿಕಾ ಬರೆದುಕೊಂಡಿದ್ದರು.

 ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಇದೀಗ ರಶ್ಮಿಕಾ ಮಂದಣ್ಣ ಅವರ ಬೆಂಬಲಕ್ಕೆ ನಿಂತಿದ್ದಾರೆ. "ಟ್ರೋಲಿಂಗ್ ನಿರಂತರವಾಗಿದೆ. ಈ ಟ್ರೋಲ್‌ ಸಮಸ್ಯೆ ಎಂದಿಗೂ ನಿಲ್ಲಲ್ಲ. ಮತ್ತೊಬ್ಬರ ಜೀವನದ ಬಗ್ಗೆ ಕಾಮೆಂಟ್‌ ಮಾಡುವುದು ತಪ್ಪು. ಸಂದರ್ಭಗಳ ಮೂಲಕ ಹಾದು ಹೋಗುವ ವ್ಯಕ್ತಿಗೆ ಮಾತ್ರ ಅದು ಏನು ಎಂದು ತಿಳಿದಿದೆ. ಅವಳನ್ನು ಬಿಡಿ" ಎಂದು ರಮ್ಯಾ ಬರೆದುಕೊಂಡಿದ್ದಾರೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article