ನವಂಬರ್ 24 ರಿಂದ ಈ 5 ರಾಶಿಯವರ ಅದೃಷ್ಟ ಬದಲಾಯಿಸಲಿರುವ ಗುರು.... ಯಶಸ್ಸು ಇವರ ಬೆನ್ನತ್ತಿ ಬರುತ್ತದೆ..!


ವೃಷಭ ರಾಶಿ : ವೃಷಭ ರಾಶಿಯವರಿಗೆ ಗುರುವಿನ ನೇರ ಚಲನೆ ಶುಭ ಫಲ ನೀಡಲಿದೆ. ವೃತ್ತಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಲಾಭಗಳಾಗಬಹುದು. ಬಡ್ತಿ ಸಿಗುವ ಅವಕಾಶಗಳು ಹೆಚ್ಚಿರಲಿವೆ. ಹೊಸ ಕೆಲಸಕ್ಕೆ ಸೇರಬಹುದು. ಆದಾಯ ಹೆಚ್ಚಲಿದೆ. 

ಕರ್ಕಾಟಕ ರಾಶಿ : ಗುರುಗ್ರಹದ ನೇರ ಚಲನೆಯು ಕರ್ಕಾಟಕ ರಾಶಿಯವರ ವೃತ್ತಿಜೀವನದಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಹಣ, ವೃತ್ತಿ, ಮದುವೆಯ ವಿಚಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ವಿದೇಶಕ್ಕೆ ತೆರಳುವ ಯೋಗ ಕೂಡಿ ಬರಲಿದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. 


ಕನ್ಯಾ ರಾಶಿ : ದೇವಗುರು ಬೃಹಸ್ಪತಿಯ ಸಂಚಾರದಲ್ಲಿ ಆಗುವ ಬದಲಾವಣೆಯು ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ವ್ಯಾಪಾರಸ್ಥರ ಲಾಭ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಂಭವವಿದೆ. ವೇತನ ಹೆಚ್ಚಳವಾಗುವ ಸಂಭವವಿದೆ. 


ವೃಶ್ಚಿಕ ರಾಶಿ : ನವೆಂಬರ್ 24 ರಿಂದ ವೃಶ್ಚಿಕ ರಾಶಿಯವರಿಗೆ ಸುವರ್ಣ ದಿನಗಳು ಆರಂಭವಾಗಲಿವೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಬರಲಿವೆ. ಉನ್ನತ ಹುದ್ದೆ ಪ್ರಾಪ್ತಿಯಾಗಲಿದೆ. ವೇತನ ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ. 

ಕುಂಭ ರಾಶಿ : ನೇರ ನಡೆ ಆರಂಭಿಸುವ ಗುರು ನಿಮ್ಮ ಅನೇಕ ಇಷ್ಟಾರ್ಥಗಳನ್ನು ಪೂರೈಸಲಿದ್ದಾನೆ. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಅದೃಷ್ಟದ ಸಹಾಯದಿಂದ, ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ಹೊಸ ಉದ್ಯೋಗಾವಕಾಶ ಸಿಗಲಿದೆ. ವಿದೇಶದಿಂದ ಉದ್ಯೋಗಾವಕಾಶಗಳು ಬರಬಹುದು.  
BREAKING NEWS
Loading latest news...
Join our WhatsApp Channel Powered By : Online Pudu