Subrahmanya :-ಕುಕ್ಕೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಿರ್ಲಾ ಗ್ರೂಪ್ ಕುಟುಂಬ

ಸುಬ್ರಮಣ್ಯ

ದೇಶದ ಪ್ರಸಿದ್ಧ ಬಿರ್ಲಾ ಗ್ರೂಪ್ ಕುಟುಂಬದ ಸದಸ್ಯರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸಿಕೆ ಬಿರ್ಲಾ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ಇದರ ಚೇರ್ಮೆನ್‌ ಆಗಿರುವ ಚಂದ್ರಕಾಂತ್‌ ಬಿರ್ಲಾ ಅವರ ತಾಯಿ, ದಿವಂಗತ ಜಿ ಪಿ ಬಿರ್ಲಾ ಅವರ ಪತ್ನಿ ಹಿಂದುಸ್ತಾನ್ ಚಾರಿಟಿ ಟ್ರಸ್ಟ್  ಇದರ ಸದಸ್ಯರೂ ಆಗಿರುವ  ನಿರ್ಮಲಾ ಬಿರ್ಲಾ ಅವರು ಹಾಗೂ ಕುಟುಂಬಸ್ಥರು ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಆಶ್ಲೇಷ ಬಲಿ ಪೂಜೆ ಹಾಗೂ ಮಹಾಪೂಜೆಯನ್ನು ನೆರವೇರಿಸಿದರು.