-->
ಶ್ರೀಮಂತರಾಗಲು ಮಹಿಳೆಯರಿಬ್ಬರನ್ನು ನರಬಲಿ ನೀಡಿದ ಪ್ರಕರಣ: ದಂಪತಿ ಸಹಿತ ಮೂವರು ಪ್ರಕರಣ

ಶ್ರೀಮಂತರಾಗಲು ಮಹಿಳೆಯರಿಬ್ಬರನ್ನು ನರಬಲಿ ನೀಡಿದ ಪ್ರಕರಣ: ದಂಪತಿ ಸಹಿತ ಮೂವರು ಪ್ರಕರಣ

ತಿರುವನಂತಪುರ: ನಾಪತ್ತೆಯಾಗಿದ್ದ ಮಹಿಳೆಯರೀರ್ವನ್ನು ಹತ್ಯೆಗೈದು ಹೂತಿಟ್ಟಿರುವ ಭೀಕರ ಮಾಟಮಂತ್ರ ಹಾಗೂ ನರಬಲಿ ಪ್ರಕರಣವನ್ನು ಕೇರಳ ಪೊಲೀಸರು ಇಂದು ಬಹಿರಂಗಪಡಿಸಿದ್ದಾರೆ. 

ತಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಶ್ರೀಮಂತರಾಗಲು ಬಯಸಿದ್ದ ಮಸಾಜ್ ಥೆರಪಿಸ್ಟ್ ಭಗವಂತ್ ಸಿಂಗ್ ಹಾಗೂ ಆತನ ಪತ್ನಿ ಲೈಲಾ ದಂಪತಿ ಎರ್ನಾಕುಲಂ ಜಿಲ್ಲೆಯ ರೋಸ್ಲಿನ್ ಹಾಗೂ ಪದ್ಮಾ ಅವರನ್ನು ಕೊಲೆಗೈದಿದೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಹಾಗೂ ಅವರ ಏಜೆಂಟ್ ನನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ರೋಸ್ಲಿನ್ ಹಾಗೂ ಪದ್ಮಾ ಎರ್ನಾಕುಲಂನಲ್ಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು. ರೋಸ್ಲಿನ್ ಜೂನ್‌ನಲ್ಲಿ ನಾಪತ್ತೆಯಾಗಿದ್ದರೆ, ಪದ್ಮಾ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೋಸ್ಲಿನ್ ಹಾಗೂ ಪದ್ಮಾ ಅವರ ಕುತ್ತಿಗೆಯನ್ನು ಸೀಳಿ, ಅವರ ದೇಹಗಳನ್ನು ತುಂಡು ತುಂಡು ಮಾಡಿ ಕತ್ತರಿಸಿ ಪಥನಂತಿಟ್ಟ ಜಿಲ್ಲೆಯ ತಿರುವಲ್ಲಾ ಎಂಬ ಪಟ್ಟಣದ ವಿವಿಧ ಸ್ಥಳಗಳಲ್ಲಿ ಹೂಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹತ್ಯೆಯು ತಮಗೆ ಆರ್ಥಿಕ ಸುಖ ಜೀವನವನ್ನು ತರುತ್ತದೆ ಎಂದು ದಂಪತಿ ನಂಬಿತ್ತು. ಬಂಧನಕ್ಕೊಳಗಾದ ಮೂರನೇ ಆರೋಪಿ ರಶೀದ್ ಅಲಿಯಾಸ್ ಮುಹಮ್ಮದ್ ಶಫಿ ಈ ಅಪರಾಧದಲ್ಲಿ ದಂಪತಿಗೆ ಸಹಾಯ ಮಾಡಿದ್ದಾನೆ. ಈತನೇ ಎರ್ನಾಕುಲಂನಿಂದ ಇಬ್ಬರು ಮಹಿಳೆಯರನ್ನು ಅಪಹರಿಸಿ ದಂಪತಿಯ ಮನೆಗೆ ಕರೆತಂದಿರುವ ಶಂಕೆ ವ್ಯಕ್ತವಾಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article