-->
ಕಿರುತೆರೆ ನಟಿ ದಿವ್ಯಾ ಶ್ರೀಧರ್ ಗೆ ವಂಚನೆ ಮಾಡಿದ ನಟ ಆರ್ನವ್ ಮತ್ತೊಂದು ಕರ್ಮಕಾಂಡ ಬಯಲು: ತೃತೀಯ ಲಿಂಗಿಯೊಂದಿಗೆ ವಿವಾಹ

ಕಿರುತೆರೆ ನಟಿ ದಿವ್ಯಾ ಶ್ರೀಧರ್ ಗೆ ವಂಚನೆ ಮಾಡಿದ ನಟ ಆರ್ನವ್ ಮತ್ತೊಂದು ಕರ್ಮಕಾಂಡ ಬಯಲು: ತೃತೀಯ ಲಿಂಗಿಯೊಂದಿಗೆ ವಿವಾಹ

ಚೆನ್ನೈ: ಕಿರುತೆರೆ ನಟಿ ದಿವ್ಯಾ ಶ್ರೀಧರ್ ಮೇಲೆ ನಡೆದಿರುವ ಹಲ್ಲೆ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾಗೂ ಖ್ಯಾತ ಕಿರುತೆರೆ ನಟ ಅರ್ನವ್‌ನನ್ನು ಕೆಲ ದಿನಗಳ ಹಿಂದೆ ತಮಿಳುನಾಡು ಪೊಲೀಸರು ಶೂಟಿಂಗ್ ಸ್ಥಳದಲ್ಲೇ ಬಂಧಿಸಿದ್ದಾರೆ. ತನ್ನ ಪತಿಗೆ ಬೇರೆ ನಟಿಯರೊಂದಿಗೆ ವಿವಾಹೇತರ ಸಂಬಂಧವಿದೆ. ಅಲ್ಲದೆ ತನಗೆ ಸಾಕಷ್ಟು ಕಿರುಕುಳ ನೀಡಿ , ಹಲ್ಲೆ ಮಾಡಿದ್ದಾನೆಂದು ಗರ್ಭಿಣಿ ಪತ್ನಿ ದಿವ್ಯಾ ಶ್ರೀಧರ್ ನೀಡಿರುವ ದೂರಿನ ಆಧಾರದ ಮೇಲೆ ಆರೋಪಿ ಅರ್ನವ್‌ನನ್ನು ಪೊಲೀಸರು ಬಂಧಿಸಿದ್ದರು. 

ಸದ್ಯ ಅರ್ನವ್‌ ಪುಳಲ್ ಜೈಲಿನಲ್ಲಿದ್ದಾನೆ. ಈ ನಡುವೆ ದಿವ್ಯಾ, ಆಕೆಯ ಬಾಯ್‌ಫ್ರೆಂಡ್ ನೊಂದಿಗೆ ಸೇರಿ ತನ್ನ ಮಗುವನ್ನು ಗರ್ಭಪಾತ ಮಾಡಿಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ದಿವ್ಯಾ ವಿರುದ್ಧವೇ ಆರ್ನವ್ ಪ್ರತ್ಯಾರೋಪ ಮಾಡಿದ್ದರು. ಆದರೆ, ದಿವ್ಯಾ ಬಿಡುಗಡೆ ಮಾಡಿರುವ ವೀಡಿಯೋ ಹಾಗೂ ಆಡಿಯೋ ಅರ್ನವ್ ಅಪರಾಧಿ ಎಂಬುದನ್ನು ಸಾಬೀತು ಮಾಡಿದೆ. 


ಇದೀಗ ಅರ್ನವ್‌ನ ಮತ್ತೊಂದು ವಂಚನೆ ಬಯಲಾಗಿದೆ. ಈತನ ವಿರುದ್ಧ ಮಲೇಷಿಯಾ ಮೂಲದ ತೃತೀಯಲಿಂಗಿ ಒಬ್ಬರು ದಿವ್ಯಾರ ವಕೀಲರಿಗೆ ಆಡಿಯೋ ಫೈಲ್ ಒಂದನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. 10 ವರ್ಷಗಳ ಹಿಂದೆ ಅರ್ನವ್ ತನ್ನನ್ನು ಮದುವೆ ಆಗಿದ್ದರು. ಆದರೆ, ಆ ಬಳಿಕ ಆತ ಬೇರೆ ಹುಡುಗಿಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಮೂಲಕ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

ಅರ್ನವ್ ಜೊತೆ ಮದುವೆಯಾಗಿದ್ದ ತೃತೀಯಲಿಂಗಿ, ತನ್ನ ಮೇಲೆ ಮಾಲ್‌ನಲ್ಲಿ ಅರ್ನವ್ ಹಲ್ಲೆ ನಡೆಸಿದ್ದ ಹಾಗೂ ದಿವ್ಯಾ ಆತನ ವಿರುದ್ಧ ಮಾಡಿದ ಎಲ್ಲಾ ಆರೋಪಗಳು ಸಹ ಸತ್ಯ ಎಂದು ಹೇಳಿದ್ದಾರೆ. ಇದೀಗ ದಿವ್ಯಾ ಮತ್ತು ಅರ್ನವ್ ವಿವಾದಕ್ಕೆ ಈ ಹೊಸ ಟ್ವಿಸ್ಟ್ ಸಿಕ್ಕಿದ್ದು , ಕಿರುತೆರೆ ಉದ್ಯಮವನ್ನು ಮತ್ತಷ್ಟು ದಂಗುಬಡಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100