-->
ಬಾಲ್ಯದ ಕನಸು ನನಸಾಗುತ್ತಿರುವಾಗಲೇ ಕುಸ್ತಿಪಟು ಯುವಕ ದಾರುಣ ಅಂತ್ಯ

ಬಾಲ್ಯದ ಕನಸು ನನಸಾಗುತ್ತಿರುವಾಗಲೇ ಕುಸ್ತಿಪಟು ಯುವಕ ದಾರುಣ ಅಂತ್ಯ

ಮಹಾರಾಷ್ಟ್ರ: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಹೃದಯಾಘಾತದಿಂದ ಮೃತಪಡುವುದು ನಾವು ಎಲ್ಲೆಡೆ ನೋಡುತ್ತಿರುತ್ತೇವೆ. ಕೆಲ ಯುವಕರು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗಲೇ ಮೃತಪಟ್ಟಿದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಬಾಲ್ಯದ ಕನಸನ್ನು ನನಸು ಮಾಡಿರುವ ಸಂತೋಷದಲ್ಲಿದ್ದಾಗಲೇ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆಯೊಂದ ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. 

ಕುಸ್ತಿಪಟು ಮಾರುತಿ ಸುರವಾಸೆ(22) ಕುಸ್ತಿಯಲ್ಲಿ ಭಾಗವಹಿಸಿ ಜಯಗಳಿಸಿದ ತನ್ನ ಸಂಭ್ರಮವನ್ನು ಮನಸಾರೆ ಆಚರಿಸುವ ಮುನ್ನವೇ ಇಹಲೋಹ ತ್ಯಜಿಸಿದ್ದಾನೆ. ಬಾಲ್ಯದಿಂದಲೂ ಕುಸ್ತಿಪಟು ಆಗಬೇಕೆಂಬ ಕನಸು ಹೊತ್ತಿದ್ದ ಮಾರುತಿಯನ್ನು ಅವನ ಪಾಲಕರು ತರಬೇತಿಗಾಗಿ ಕೊಲ್ಲಾಪುರಕ್ಕೆ ಕಳುಹಿಸಿದ್ದರು. ಅಲ್ಲಿ ಕುಸ್ತಿಯಲ್ಲಿ ಚೆನ್ನಾಗಿ ಪಳಗಿದ್ದ ಮಾರುತಿ ಗ್ರಾಮದಲ್ಲಿ ನಡೆದ ಕುಸ್ತಿ ಪಂದ್ಯದಲ್ಲಿ ಘನಾನುಘಟಿಗಳ ಎದುರು ಆಡಿ, ಎಲ್ಲರನ್ನೂ ಸೋಲಿಸಿ ವಿಜೇತನಾಗಿದ್ದ. 

ಬಾಲ್ಯದ ಕನಸು ನನಸಾಗುತ್ತಿದ್ದಂತೆಯೇ ಆತ ಸೇರಿದಂತೆ ಅವನ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲಿಯೇ ಆತ ಕುಸಿದು ಬಿದ್ದಿದ್ದಾನೆ. ಆಟವಾಡಿ ಸುಸ್ತಾದ ಕಾರಣ ಬಿದ್ದಿರಬಹುದೆಂದು ಮನೆಯವರು ಆತನನ್ನು ಎಬ್ಬಿಸಲು ಹೋದರೆ ಅದಾಗಲೇ ಆತ ಕೊನೆಯುಸಿರೆಳೆದಿದ್ದು ತಿಳಿದುಬಂದಿದೆ. ಸಂಭ್ರಮದ ಮನೆಯಲ್ಲೀಗ ಸೂತಕದ ಛಾಯೆ ಮೂಡಿದೆ. ಪುತ್ರನನ್ನು ಕಳೆದುಕೊಂಡ ಹೆತ್ತವರ ಕಣ್ಣೀರು ನೋಡಲಾಗುತ್ತಿಲ್ಲ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100