ಮುಲ್ಕಿ: ಹೆಜ್ಜೇನು ದಾಳಿಯಿಂದ ಸೆಂಟ್ರಿಂಗ್ ಕಾರ್ಮಿಕರಿಗೆ ಗಂಭೀರ ಗಾಯ; ನಾಲ್ವರು ಆಸ್ಪತ್ರೆಗೆ

ಮುಲ್ಕಿ: ಇಲ್ಲಿನ‌ ಬಪ್ಪನಾಡು ಸೇತುವೆಯ ಬಳಿಯ ದ್ವಿಚಕ್ರ ವಾಹನದ ಗ್ಯಾರೇಜ್ ಬಳಿ ಮನೆಯೊಂದರ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆ ನಡೆದಿದೆ. ಗಾಯಾಳು ಕಾರ್ಮಿಕರು ಮುಲ್ಕಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮೂಡುಬಿದಿರೆ ಸಾಣೂರು ನಿವಾಸಿ ನಿತಿನ್ ( 24 ) , ಮೂಡು ಮಾರ್ನಾಡು ವಿಶ್ವನಾಥ ಪೂಜಾರಿ ( 47 ) , ಧರೆಗುಡ್ಡೆ ನಿವಾಸಿಗಳಾದ ಉಮೇಶ್ ಶೆಟ್ಟಿ ( 34 ) , ಪ್ರೇಮದಾಸ ( 41 ) ಎಂದು ಗುರುತಿಸಲಾಗಿದೆ.

ಗಾಯಾಳು ಕಾರ್ಮಿಕರು ಮನೆಯೊಂದರ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನು ದಾಳಿ ನಡೆಸಿದೆ. ಈ ಸಂದರ್ಭ ಕಾರ್ಮಿಕರು ಪ್ರಾಣಭಯದಿಂದ ಸ್ಥಳದಿಂದ ಓಡಿದ್ದಾರೆ. ಆದರೆ ದಾಳಿ ನಡೆಸಿರುವ ಜೇನು ಹುಳುಗಳು ಗಂಭೀರವಾಗಿ ಗಾಯ ಮಾಡಿದೆ. 

BREAKING NEWS
Loading latest news...
Join our WhatsApp Channel Powered By : Online Pudu