"ಭಾರತೀಯ ಭಾಷೆಗಳು ಮತ್ತು ತಾಂತ್ರಿಕ ಶಿಕ್ಷಣ" – ಆಳ್ವಾಸ್ ನಲ್ಲಿ ಉಪನ್ಯಾಸ

 

 


ಮೂಡುಬಿದಿರೆ: ದೇಶ ಭಾಷೆಗಳ ಉಪಯೋಗ ಹೇಗೆ ಆಗಬೇಕೆಂಬ ಉನ್ನತ ಯೋಚನೆಗಳು ನಮ್ಮ ನಡುವೆ ಜರಗುತಿದ್ದರೂ, ಅವುಗಳನ್ನು ಕರ್ಯಗೊಳಿಸಲು ಇರುವ ಯೋಜನೆಗಳು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ಕನ್ನಡ ಕೀಬೋರ್ಡ ಜನಕ ಹಾಗೂ  ಮಣಿಪಾಲ ಎಂಐಟಿ ನಿವೃತ್ತ ಪ್ರಾಧ್ಯಪಕ ಡಾ ಕೆಪಿ ರಾವ್ ನುಡಿದರು.

 

ಅವರು ಮಿಜಾರಿನ ಆಳ್ವಾಸ್ ತಾಂತ್ರಿಕ ವಿದ್ಯಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಸಹಯೋಗದೊಂದಿಗೆ  ಕನ್ನಡ ಸಂಘದ ವಾರ್ಷಿಕ ಕರ್ಯಕ್ರಮಗಳ ಉದ್ಘಾಟನಾ ಸಮಾರಂಭ 2022ರಲ್ಲಿ ಮುಖ್ಯ ಅತಿಥಿಗಳಾಗಿ   "ಭಾರತೀಯ ಭಾಷೆಗಳು ಮತ್ತು ತಾಂತ್ರಿಕ ಶಿಕ್ಷಣ" ವಿಷಯದ ಕುರಿತು ಮಾತನಾಡಿದರು.

 

ನಮ್ಮ ಸರ್ಕಾರಗಳ ಕನ್ನಡ ಸಂವೇಧಿ ನಿಲುವು ಸಂಶಯಾಸ್ಪದವಾಗಿದೆ.  ಭಾಷೆಯನ್ನು ಉಳಿಸಿ ಬೆಳಸುವಲ್ಲಿ ಕೆಲಸಗಳಾಗಬೇಕು.  ಆಗ ಭಾಷೆಯ ಜತೆಗೆ ಸೇರಿಕೊಂಡಿರುವ ಆಚಾರ, ವಿಚಾರ, ಸಂಸ್ಕೃತಿಗಳು ಉಳಿಯಲು ಸಾಧ್ಯ ಎಂದರು.  ಸೃಜನಾತ್ಮಕ ಶಿಸ್ತಿನ ಮೂಲಕ ತೊಡಗುವ ಯಾವುದೇ ಕೆಲಸ ಸಫಲವಾಗಬಲ್ಲದು.  ತಾವು ಕೆಪಿರಾವ್ ಕೀಬೋರ್ಡ ತಯಾರಿಸದ ಬಗೆಯನ್ನು ವಿವರಿಸಿದ ಅವರು, ಕಂಪ್ಯೂಟರಗಳಿA ಕವಿತ್ವ ಬರೆಯುವ ಕೆಲಸಗಳಾಗಬೇಕು ಎಂದರು.  ತಂತ್ರಜ್ಞಾನದ ಸದ್ಬಳಕೆಯಿಂದ ಕಂಪ್ಯೂಟರ್ನಲ್ಲಿ ಭಾಷೆಗಳನ್ನು ಬೆಳಸುವ ಬಗೆಗಳನ್ನು ವಿವರಿಸಿದರು.

 ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದ ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ   ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮಾತನಾಡಿ, ವೃತ್ತಿಪರ ಶಿಕ್ಷಣದಲ್ಲಿ ಕನ್ನಡದ ಆಸೆಯನ್ನು ಹುಟ್ಟಿಸುವ ಕೆಲಸವಾಗಬೇಕು.  ಪ್ರಾಥಮಿಕ ಹಂತದಿA ನೆಲದ ಸಾಂಸ್ಕೃತಿಕ ಸೊಗಡಿನ ಪರಿಚಯವಾದಾಗ, ಉತ್ತಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚರ್ಯ ಡಾ ಪೀಟರ್ ಫೆರ್ನಾಂಡೀಸ್,ಕನ್ನಡ ಸಂಘದ ಅಧ್ಯಕ್ಷ ಗಣೇಶ್ ಆಚರ್ಯ ಉಪಸ್ಥಿತರಿದ್ದರು. ಭೂಮಿಕಾ ಕಾರ್ಯಕ್ರಮ ನಿರ್ವಹಿಸಿ, ಪ್ರಣೀತಾ ವಂದಿಸಿದರು.