ಮಂಗಳೂರು: 'ಸಲಿಂಗ ಕಾಮ'ದ ತೀಟೆಗೆ ವೃದ್ಧ ಬಲಿ: ಕೇವಲ 300ರೂ‌.ಗೆ ಹತ್ಯೆಗೆ ಮಾಡಿದ ಯುವಕ ಅರೆಸ್ಟ್

ಮಂಗಳೂರು: ಸಲಿಂಗ ಕಾಮದ ತೀಟೆಗೆ ವೃದ್ಧನೋರ್ವನು ಬಲಿಯಾಗಿದ್ದು, ಕೇವಲ 300 ರೂ.ಗಾಗಿ ಹತ್ಯೆ ಮಾಡಿರುವ ಯುವಕನೀಗ ಜೈಲು ಪಾಲಾಗಿದ್ದಾನೆ. ಈ ಘಟನೆ‌ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪದವು ಎಂಬಲ್ಲಿನ ಕಿಯೋನಿಕ್ಸ್ ಗೆ ಸೇರಿದ ಪ್ರದೇಶದಲ್ಲಿ ನಡೆದಿದೆ.

ನಗರದ ಮಂದಾರಬೈಲು ಜಯಾನಂದ ಆಚಾರ್ಯ(65) ಕೊಲೆಯಾದ ವೃದ್ಧ. ಕುಂಜತ್ ಬೈಲ್, ದೇವಿನಗರ ನಿವಾಸಿ ರಾಜೇಶ್ ಪೂಜಾರಿ(31) ಕೊಲೆಗೈದ ಆರೋಪಿ.

ಜಯಾನಂದ ಆಚಾರ್ಯ ಕೂಲಿ ಕೆಲಸ ಮಾಡುತ್ತಿದ್ದು, ದಸರಾ ವೇಳೆ ಹೆಣ್ಣು ವೇಷವನ್ನು ಹಾಕುತ್ತಿದ್ದರು. ಇವರು ವಿಪರೀತ ಮದ್ಯದ ಚಟ ಹೊಂದಿದ್ದರು. ರಾಜೇಶ್ ಪೂಜಾರಿ ನಗರದ ಲಾಲ್ ಬಾಗ್ ನಲ್ಲಿರುವ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ‌. ಸಲಿಂಗ ಕಾಮದ ಬಯಕೆಯಿಂದ ಜಯಾನಂದ ಆಚಾರ್ಯ ಬಾರ್ ಬಳಿಯಿಂದಲೇ ರಾಜೇಶ್ ಪೂಜಾರಿಯನ್ನು ಅ.7 ರಿಂದ‌ ಅ.8ರ ನಡುವೆ ಕರೆದೊಯ್ದಿದ್ದಾರೆ.

ಆದರೆ ಆ ಬಳಿಕ ಆತನಿಗೆ 300 ರೂ. ಕೊಡಲು ಸತಾಯಿಸಿದ್ದಾರೆ. ಪರಿಣಾಮ ಕೋಪಗೊಂಡ ರಾಜೇಶ್ ಪೂಜಾರಿ ದಾರವೊಂದರಿಂದ ಕತ್ತು ಬಿಗಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ‌. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾವೂರು ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿ ರಾಜೇಶ್ ಪೂಜಾರಿಯನ್ನು ಬಂಧಿಸಿದ್ದಾರೆ.