-->
ಬಹಳಷ್ಟು ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಕನ್ನಡಕ್ಕೆ? ಜೋಗಿ ಪ್ರೇಮ್ ಸಿನಿಮಾದಲ್ಲಿ ನಟಿಸುವ ಸಾಧ್ಯತೆ

ಬಹಳಷ್ಟು ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಕನ್ನಡಕ್ಕೆ? ಜೋಗಿ ಪ್ರೇಮ್ ಸಿನಿಮಾದಲ್ಲಿ ನಟಿಸುವ ಸಾಧ್ಯತೆ

ಬೆಂಗಳೂರು : 'ಜೋಗಿ' ಪ್ರೇಮ್ ನಿರ್ದೇಶನದಲ್ಲಿ, ಧ್ರುವ ಸರ್ಜಾ ನಾಯಕ ನಟನಾಗಿ ಅಭಿನಯಿಸುವ ಹೊಸ ಸಿನಿಮಾದ ಶೀರ್ಷಿಕೆಯು ಸೆ. 26ರಂದು ಘೋಷಣೆಯಾಗಲಿದೆ. ಇದೀಗ ಈ ಸಿನಿಮಾದಲ್ಲಿ ‌ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂಬಂತಹ ಸುದ್ದಿ ಕೇಳಿಬಂದಿದೆ. ಈ ಸಿನಿಮಾದಲ್ಲಿ ನಟಿಸಿದಲ್ಲಿ ಕನ್ನಡದಲ್ಲಿ ಶಿಲ್ಪಾ ಶೆಟ್ಟಿಯವರು ಮೂರನೇ ಚಿತ್ರದಲ್ಲಿ ನಟಿಸಿದಂತಾಗುತ್ತದೆ.
 
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಇನ್ನೂ ಟೈಟಲ್ ಲಾಂಚ್ ಆಗದ ಈ ಸಿನಿಮಾ ಮುಹೂರ್ತ ಎ.24 ರಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆದಿತ್ತು . ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಕೊಂಚ ತಡವಾಗಿದ್ದು, ಅಕ್ಟೋಬರ್‌ನಿಂದ‌ ಸಿನಿಮಾ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. 

ಪ್ರೇಮ್ ಈ ಸಿನಿಮಾ ತಾರಾಗಣವನ್ನು ಅಂತಿಮ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ, ಈ ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದೀಗ ಶಿಲ್ಪಾ ಶೆಟ್ಟಿಯವರೂ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ . ಇದೊಂದು ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ, ಸಂಜಯ್ ಮತ್ತು ಶಿಲ್ಪಾ ಶೆಟ್ಟಿ ಅಭಿನಯಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ, ಚಿತ್ರತಂಡದಿಂದ ಈ ಕುರಿತು ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ . ಶಿಲ್ಪಾ ಒಪ್ಪಿದರೆ , ' ಪ್ರೀತ್ರೋದ್ ತಪ್ಪಾ ' ಮತ್ತು ' ಆಟೋ ಶಂಕರ್ ' ನಂತರ ಇದು ಕನ್ನಡದಲ್ಲಿ ಅವರ ಮೂರನೆಯ ಚಿತ್ರವಾಗಲಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay RS 100

  

Advertise under the article