-->
ವೈದ್ಯಕೀಯ ವಿದ್ಯಾರ್ಥಿನಿಯ ಸಹಕಾರದಿಂದ ರೈಲಿನಲ್ಲಿಯೇ ಮಹಿಳೆಗೆ ಹೆರಿಗೆ: ತಾಯಿ - ಮಗು ಆರೋಗ್ಯ

ವೈದ್ಯಕೀಯ ವಿದ್ಯಾರ್ಥಿನಿಯ ಸಹಕಾರದಿಂದ ರೈಲಿನಲ್ಲಿಯೇ ಮಹಿಳೆಗೆ ಹೆರಿಗೆ: ತಾಯಿ - ಮಗು ಆರೋಗ್ಯ

ಆಂಧ್ರಪ್ರದೇಶ: ಹೆರಿಗೆ ನೋವು ಕಾಣಿಸಿಕೊಂಡ ತುಂಬು ಗರ್ಭಿಣಿಗೆ ರೈಲಿನಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ವಿದ್ಯಾರ್ಥಿನಿಯ ಸಹಕಾರದಿಂದ ಆಕೆ ಸುಸೂತ್ರವಾಗಿ ಮಗುವಿಗೆ ಜನ್ಮ ನೀಡಿರುವ ಘಟನೆ ಆಂಧ್ರಪ್ರದೇಶದ ಸಿಕಂದರಾಬಾದ್ ದುರಂತೊ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಿನ್ನೆ ನಡೆದಿದೆ.

ಶ್ರೀಕಾಕುಳಂ ಮೂಲದ ಈ ಗರ್ಭಿಣಿ ರೈಲಿನಲ್ಲಿ ಸಂಚಾರ ಮಾಡುತ್ತಿದ್ದರು. ರೈಲು ಅನಕಾಪಲ್ಲಿ‌ ನಿಲ್ದಾಣಕ್ಕೆ ಸಮೀಪದಲ್ಲಿರುವಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಚಾರ ತಿಳಿದ ಅದೇ ಕೋಚ್ ನಲ್ಲಿದ್ದ ವೈದ್ಯಕೀಯ ಅಂತಿಮ ವರ್ಷದ ವಿದ್ಯಾರ್ಥಿನಿ ಸಹಕಾರ ಮಾಡಿ ಹೆರಿಗೆ ಮಾಡಿಸಿದ್ದಾಳೆ.

ಸದ್ಯ ತಾಯಿ - ಮಗು ಇಬ್ಬರೂ ಸುರಕ್ಷಿತವಾಗಿ ಆರೋಗ್ಯವಾಗಿದ್ದಾರೆ. ರೈಲು ನಿಂತ ತಕ್ಷಣ ಮಾಹಿತಿ ತಿಳಿದು ಅಧಿಕಾರಿಗಳು ಆಗಮಿಸಿ ತಾಯಿ - ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಸುಸೂತ್ರವಾಗಿ ಹೆರಿಗೆ ಮಾಡಿದ ವಿದ್ಯಾರ್ಥಿನಿಗೆ ಮಹಿಳೆಯ ಕುಟುಂಬಿಕರು ಅಭಿನಂದನೆ ಸಲ್ಲಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article