ನನ್ನ ಜಶ್ವಂತ್ ಮಧ್ಯ ಬಾಂಡಿಂಗ್ ಬೆಳೆದಿದೆ.. ಆತನನ್ನು ಕಳೆದುಕೊಳ್ಳಲು ಇಷ್ಟವಿಲ್ಲ- ಸಾನ್ಯ


ಬಿಗ್ ಬಾಸ್ನಲ್ಲಿ ಸಾನ್ಯಾ ಹಾಗೂ ಜಶ್ವಂತ್ ಇಬ್ಬರೂ ಕ್ಲೋಸ್ ಆಗುತ್ತಿದ್ದಾರೆ. ಈ ವಿಚಾರದಲ್ಲಿ ರೂಪೇಶ್ ಹಾಗೂ ನಂದಿನಿ ಇಬ್ಬರಿಗೂ ಬೇಸರ ಇದೆ. ಕೆಲ ದಿನಗಳಿಂದ ಸಾನ್ಯಾ ಅವರು ರೂಪೇಶ್ ಜತೆ ಸರಿಯಾಗಿ ಮಾತನಾಡಿಲ್ಲ. ಈ ವಿಚಾರದಿಂದ ರೂಪೇಶ್​ಗೆ ಬೇಸರ ಆಗಿದೆ. 

‘ನೀನು ನನ್ನ ಬೆಸ್ಟ್ ಫ್ರೆಂಡ್ ಅಲ್ಲ. ನಾನು ನಿನ್ನ ಕ್ಲೋಸ್ ಫ್ರೆಂಡ್ ಅಷ್ಟೇ. ನೀನು ಜಶ್ವಂತ್​​ಗೆ ಬೆಸ್ಟ್ ಫ್ರೆಂಡ್ಸ್. ಎರಡು ದಿನಗಳಿಂದ ನೀನು ಎಲ್ಲಿದ್ದೀಯೋ ಅಲ್ಲಿ ಹೋಗಿ ನಾನು ಮಾತನಾಡುತ್ತಿದ್ದೇನೆ. ಒಂದೊಮ್ಮೆ ನೀನಿದ್ದಲ್ಲಿ ನಾನು ಬರಲಿಲ್ಲ ಎಂದಿದ್ದರೆ ನಮ್ಮಿಬ್ಬರ ನಡುವೆ ಮಾತುಕತೆಯೇ ಆಗುತ್ತಿರಲಿಲ್ಲ. ನಾನು ಎರಡು ದಿನಗಳಿಂದ ಬೇಸರದಲ್ಲಿ ಇದ್ದೇನೆ. ಅದು ನಿನಗೆ ಅರ್ಥವಾಗಿಯೇ ಇಲ್ಲ’ ಎಂದರು ರೂಪೇಶ್.

ಇದಕ್ಕೆ ಉತ್ತರ ನೀಡಿದ ಸಾನ್ಯಾ  ‘ಜಶ್ವಂತ್ ನನ್ನ ಕ್ಲೋಸ್​ ಫ್ರೆಂಡ್ ಅಷ್ಟೇ. ಬೆಸ್ಟ್​ ಫ್ರೆಂಡ್ ಅಲ್ಲವೇ ಅಲ್ಲ. ನಮ್ಮಿಬ್ಬರ ಮಧ್ಯೆ ಒಂದು ಬಾಂಡಿಂಗ್ ಬೆಳೆದಿದೆ. ನಿನ್ನನ್ನು ಕಳೆದುಕೊಳ್ಳೋಕೆ ನನಗೆ ಇಷ್ಟ ಇಲ್ಲ’ ಎಂದರು ಸಾನ್ಯಾ.