ಸೋಲು ಹಾಗೂ ಗೆಲುವುಗಳು ಜೀವನದಲ್ಲಿ ಜೀವಾನುಭವವನ್ನ ನೀಡುತ್ತವೆ: ಪ್ರೋ ಬಾಲಕೃಷ್ಣ ಶೆಟ್ಟಿ




ಮೂಡುಬಿದಿರೆ:  ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಲು ಅವರ ಶಿಕ್ಷಕರು ಎಷ್ಟು ಮುಖ್ಯ ಪಾತ್ರ ವಹಿಸುತ್ತಾರೊ, ಹಾಗೆಯೆ ವಿದ್ಯಾರ್ಥಿಗಳ ಸಾಧನೆ, ಪರಿಶ್ರಮ, ಹಾಗೂ ಕನಸುಗಳು  ಪ್ರಮುಖ ಪಾತ್ರವಹಿಸುತ್ತವೆ. ಶಿಕ್ಷಕರು ಸೌರಮಂಡಲವಾಗಿ ವಿದ್ಯಾರ್ಥಿಗಳನ್ನು ತಾರೆಗಳಾಗಿ ಮಿಂಚುವAತೆ ಪರಿವರ್ತಿಸುತ್ತಾರೆ ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ ಬಾಲಕೃಷ್ಣ ಶೆಟ್ಟಿ ನುಡಿದರು.

 ಅವರು ಆಳ್ವಾಸ್ ಸ್ನಾತಕೋತ್ತರ  ಆ್ಯನಲಿಟಿಕಲ್ ಕೆಮೆಸ್ಟಿç ವಿಭಾಗದ ವಾರ್ಷಿಕ ಚಟುವಟಿಕೆಗಳ ಬಹುಮಾನ ವಿತರಣಾ ಕರ‍್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  



ಯಾರು ತನ್ನೊಳಗಿನ  ದೈವತ್ವವನ್ನು ಅರಿತುಕೊಳ್ಳುತ್ತಾರೊ, ಅವರು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ.  ಸೋತಾಗ ಕುಗ್ಗದೆ, ಗೆದ್ದಾಗ ಬೀಗದೆ ಸಮಚಿತ್ತದಿಂದ ಬದುಕನ್ನು ಎದುರುಗೊಳ್ಳಬೇಕು ಎಂದರು. 

ಈ  ಶೈಕ್ಷಣಿಕ ವರ್ಷದಲ್ಲಿ ನಡೆದ ವಿವಿಧ ಚಟುವಟಿಕೆಗಳಾದ ಕೆಮ್ ರಂಗೋಲಿ, ಕೆಮ್ ಕ್ವಿಝ್, ಕೆಮ್ ಮೆಮೊರಿ, ಕೆಮ್ ಕ್ಲಿಕ್‌ನಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.  ಬೆಸ್ಟ್ ಪ್ರೋಜೆಕ್ಟ್ ಪ್ರಸೆಂಟೇಶನ್- ಭೂಮಿಕಾ ಹಾಗೂ ನಿಶಾ, ಬೆಸ್ಟ್ ಔಟ್‌ಗೊಯಿಂಗ್ ಸ್ಟುಡೆಂಟ್- ಲಿಖಿತಾ, ಬೆಸ್ಟ್ ಆಲ್ರೌಂಡರ್- ಸೌಂರ‍್ಯ, ಬೆಸ್ಟ್ ಎಕ್ಟಿವ್ ಪರ್ಸನಾಲಿಟಿ- ಅಭಿಮಾನ್ ಪಡೆದುಕೊಂಡರು. 


ವಿಭಾಗದ ಮುಖ್ಯಸ್ಥ ಪ್ರೋ ರಾಜಕುಮಾರ್ ಭಟ್, ಉಪನ್ಯಾಸಕರುಗಳಾದ ರಾಜೇಶ್ ಕುಮಾರ್, ರಂಜಿತಾ ಆಚರ‍್ಯ, ಅರುಣ್ ಕುಮಾರ್ ಉಪಸ್ಥಿತರಿದ್ದರು.  ಕರ‍್ಯಕ್ರಮವನ್ನು ಪ್ರಾಪ್ತಿರಾಣಿ ನಿರೂಪಿಸಿ, ಶ್ರೀರಕ್ಷಾ ಆರ್ ಮುದ್ರಿ ಪ್ರಾರ್ಥಿಸಿದರು.