
ಬೆಳ್ತಂಗಡಿ: ವಿವಾಹಿತೆ ನೇಣಿಗೆ ಶರಣು, ಕಾರಣ ನಿಗೂಢ
8/04/2022 09:16:00 AM
ಬೆಳ್ತಂಗಡಿ: ವಿವಾಹಿತೆ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ಎಂಬಲ್ಲಿ ಗುರುವಾರ ನಡೆದಿದೆ.
ಮುಂಡ್ರುಪ್ಪಾಡಿ ನಿವಾಸಿ ದೀಪಕ್ ಪತ್ನಿ ಚೈತ್ರಾ ಅಡಿಗ (25) ಮೃತ ಮಹಿಳೆ.
ಚೈತ್ರಾ ಅಡಿಗ ಅವರು ಉಜಿರೆಯಲ್ಲಿನ ಖಾಸಗಿ ಶಾಲೆಯಲ್ಲಿ ಕೆಲ ಕಾಲ ಶಿಕ್ಷಕಿಯಾಗಿ ವೃತ್ತಿ ನಿರ್ವಹಿಸಿದ್ದರು. 2 ವರ್ಷಗಳಿಂದ ಮನೆಯಲ್ಲಿಯೇ ಇದ್ದಾರೆ ಎನ್ನಲಾಗಿದೆ. ಮೂರು ವರ್ಷದ ಹಿಂದೆ ಇವರ ವಿವಾಹವಾಗಿದ್ದು ಇವರಿಗೆ ಒಂದು ಮಗುವೂ ಇದೆ. ಇದೀಗ ಬಿ.ಎಡ್ ವಿದ್ಯಾಭ್ಯಾಸ ಮಾಡುವ ಇಂಗಿತವನ್ನು ಹೊಂದಿದ್ದು, ಪತಿ ಮನೆಯವರು ಮುಂದಿನ ವರ್ಷ ತರಗತಿಗೆ ಸೇರುವಂತೆ ತಿಳಿಸಿದ್ದರು ಎಂದು ಹೇಳಲಾಗಿದೆ.
ಆದರೆ ಇದೀಗ ಅವರು ನೇಣಿಗೆ ಶರಣಾಗಿದ್ದು, ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.