ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ ಎಸ್‌ಬಿಐ: ಗೃಹ ಸಾಲ ಮತ್ತಷ್ಟು ದುಬಾರಿ!

ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ ಎಸ್‌ಬಿಐ: ಗೃಹ ಸಾಲ ಮತ್ತಷ್ಟು ದುಬಾರಿ!





ದೇಶದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದೆ.



ಬ್ಯಾಂಕ್‌ನ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲ(MCLR) ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್‌ (BPS)ನಷ್ಟು ಹೆಚ್ಚಿಸಿದೆ. ಇದರಿಂದ ಗ್ರಾಹಕರಿಗೆ ತಿಂಗಳ ಕಂತು(EMI) ದುಬಾರಿಯಾಗಿ ಪರಿಣಮಿಸಲಿದೆ.



ಗೃಹ ಸಾಲಗಳಂತಹ ದೀರ್ಘಾವಧಿಯ ಸಾಲಗಳನ್ನು MCLR ದರಕ್ಕೆ ಲಿಂಕ್ ಮಾಡಲಾಗಿದ್ದು, ಎಸ್‌ಬಿಐನ ಈ ನಿರ್ಧಾರದಿಂದ ಮಾಸಿಕ ಸಾಲದ ಕಂತು ಹೆಚ್ಚಳವಾಗಲಿದೆ.



ಬ್ಯಾಂಕ್ ಇತರ ಮೆಚುರಿಟಿ ಆಧಾರಿತ ಸಾಲಗMCLR ಅನ್ನು ಹೆಚ್ಚಿಸಿದ್ದು, ಅದರ ದರ ಈಗ 7.70% ಆಗಿದೆ. ಕ್ರಮವಾಗಿ, ಅಲ್ಪಾವಧಿ ಸಾಲ 7.35%, ಆರು ತಿಂಗಳು 7.65%, ಎರಡು ವರ್ಷಗಳು 7.90% ಮತ್ತು ಮೂರು ವರ್ಷಗಳು 8% ಬಡ್ಡಿದರವಾಗಿರುತ್ತದೆ..


ಕಳೆದ ಏಪ್ರಿಲ್ 2022ರಿಂದ, ಎಸ್‌ಬಿಐ MCLR ಅನ್ನು 70 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. SBI ಈ ವರ್ಷದ ಎಪ್ರಿಲ್, ಮೇ ಹಾಗೂ ಜುಲೈ ತಿಂಗಳಿನಲ್ಲಿ MCLRನ್ನು ತಲಾ 10 ಬಿಪಿಎಸ್ ಹೆಚ್ಚಿಸಿತ್ತು. ಬಳಿಕ ಮತ್ತೆ ಜೂನ್‌ನಲ್ಲಿ MCLRನ್ನು 20 ಬಿಪಿಎಸ್ ನಷ್ಟು ಹೆಚ್ಚಿಸಿದೆ. ಇದೀಗ ಮತ್ತೊಮ್ಮೆ 20 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.



ಬ್ಯಾಂಕ್ ತನ್ನ ರೆಪೊ ಆಧಾರಿತ ಸಾಲದ ಮೇಲಿನ ಬಡ್ಡಿದರ (RLLR) ಮತ್ತು ಬಾಹ್ಯ ಮಾನದಂಡದ ಸಾಲ ದರವನ್ನು (EBLR) 50 ಬಿಪಿಎಸ್ ನಿಂದ 7.65% ಗೆ ಹೆಚ್ಚಿಸಿದೆ.



ಎಸ್‌ಬಿಐ ಜೊತೆಗೆ ಇತರ ಬ್ಯಾಂಕ್‌ಗಳು ಸಹ ಸಾಲದ ದರವನ್ನು ಹೆಚ್ಚಿಸುತ್ತಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ತಿಂಗಳ ಆರಂಭದಲ್ಲಿ ಹಣದುಬ್ಬರವನ್ನು ತಗ್ಗಿಸಲು ಬೆಂಚ್‌ಮಾರ್ಕ್ ಪಾಲಿಸಿ ದರಗಳನ್ನು 50 ಬಿಪಿಎಸ್‌ಗಳಷ್ಟು ಹೆಚ್ಚಿಸಿದ ಕಾರಣ ಈ ಬೆಳವಣಿಗೆ ಉಂಟಾಗಿದೆ.


ಎಸ್‌ಬಿಐ ಮಾತ್ರವಲ್ಲದೆ, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್‌ಗಳು ತಮ್ಮ ಎಂಸಿಎಲ್‌ಆರ್ ದರಗಳನ್ನು 5-10 ಬಿಪಿಎಸ್ ವ್ಯಾಪ್ತಿಯಲ್ಲಿ ಹೆಚ್ಚಿಸಿವೆ.