-->

ರೀಲ್ಸ್ ಸ್ಟಾರ್ ಅರೆಸ್ಟ್ ಬೆನ್ನಲ್ಲೇ ಹೊಳೆಯುದೆಲ್ಲ ಚಿನ್ನವಲ್ಲವೆಂದು ಸಂದೇಶ ರವಾನಿಸಿದ ಕೇರಳ ಪೊಲೀಸರು

ರೀಲ್ಸ್ ಸ್ಟಾರ್ ಅರೆಸ್ಟ್ ಬೆನ್ನಲ್ಲೇ ಹೊಳೆಯುದೆಲ್ಲ ಚಿನ್ನವಲ್ಲವೆಂದು ಸಂದೇಶ ರವಾನಿಸಿದ ಕೇರಳ ಪೊಲೀಸರು

ತಿರುವನಂತಪುರ: ಕೇರಳ ಪೊಲೀಸರು ಇತ್ತೀಚೆಗೆ ಇನ್ ಸ್ಟಾಗ್ರಾಂ ಸ್ಟಾರ್ ಓರ್ವನನ್ನು ವಂಚನೆ, ಯುವತಿಯರಿಗೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಬಂಧಿಸಿದ್ದು, ಇದರ ಬೆನ್ನಲ್ಲೇ ರೀಲ್ಸ್ ಮೂಲಕ ಎಚ್ಚರಿಕೆ ಸಂದೇಶ ಒಂದನ್ನು ರವಾನಿಸಿದ್ದಾರೆ.‌ ಸಾಮಾಜಿಕ ಜಾಲತಾಣಗಳಲ್ಲಿ ಹೊಳೆಯುವುದೆಲ್ಲ ಚಿನ್ನವಲ್ಲ. ವೇಷ ಮತ್ತು ವ್ಯಕ್ತಿತ್ವದ ಮರೆಮಾಚಿ  ವಂಚಿಸುವವರು ಇದ್ದಾರೆ. ಗಮನಹರಿಸಿ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. 

ಕೇರಳ ಪೊಲೀಸರು ಈ ರೀತಿಯಲ್ಲಿ ಎಚ್ಚರಿಕೆ ನೀಡಲು ಕಾರಣವಿಲ್ಲದಿಲ್ಲ. ಇತ್ತೀಚೆಗೆ ವಿನೀತ್ ಎಂಬ ನಯಚಕನನ್ನು ಪೊಲೀಸರು ಬಂಧಿಸಿದ್ದರು. ಈತ ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕವೇ ಕೊಂಚ ಖ್ಯಾತಿ ಗಳಿಸಿದ್ದ. ಯುವತಿಯರನ್ನು ಮರಳು ಮಾಡಿ ವಂಚಿಸುವುದೇ ಈತನ ಕೆಲಸವಾಗಿತ್ತು. 

ಕೇರಳದ ಥಂಪನೂರ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ತಾನು ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ, ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆಂದು ಸುಳ್ಳು ಹೇಳಿ ಯುವತಿಯರನ್ನು ನಂಬಿಸುತ್ತಿದ್ದ. ಆದರೆ , ಈತ ಓದಿರುವುದು ಕೇವಲ ದ್ವಿತೀಯ ಪಿಯುಸಿ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ರೀಲ್ಸ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿರುತ್ತಿದ್ದ ವಿನೀತ್, ಜಾಲತಾಣಗಳಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಪರಿಚಯ ಪ್ರೇಮಕ್ಕೆ ತಿರುಗಿದಾಗ ಅವರ ಮೇಲೆ ಅನುಮಾನ ಪಡುತ್ತಿದ್ದ. ಬೇರೊಬ್ಬನೊಂದಿಗೆ ನಿನಗೆ ಸಂಬಂಧ ಇದೆ ಎಂದು ಕತೆ ಕಟ್ಟುತ್ತಿದ್ದ . 

ನಂಬಿಸಲು ಆತನ ಬಲೆಗೆ ಬಿದ್ದ ಹುಡುಗಿಯರು ತಮ್ಮ ಈಮೇಲ್ ಮತ್ತು ಇನ್‌ಸ್ಟಾಗ್ರಾಂ ಐಡಿ ಹಾಗೂ ಪಾಸ್‌ವರ್ಡ್ ನೀಡುತ್ತಿದ್ದರು. ಬಳಿಕ ಅವರ ಇನ್‌ಸ್ಟಾಗ್ರಾಂ ಖಾತೆಗಳನ್ನು ವಿನೀತ್ ನಿರ್ವಹಿಸುತ್ತಿದ್ದ . ತನ್ನ ಸೂಚನೆಗಳನ್ನು ಅನುಸರಿಸಲು ಹುಡುಗಿಯರನ್ನು ಒತ್ತಾಯಿಸುತ್ತಿದ್ದ . ಹೊಸ ಕಾರು ಖರೀದಿಸಿದ್ದೇನೆ. ಒಂದು ಡ್ರೈವ್ ಹೋಗೋಣ ಎಂದು ಆಹ್ವಾನಿಸುತ್ತಿದ್ದ. ಆತನ ಆಹ್ವಾನವನ್ನು ನಂಬಿ ಆತನೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತಿರುವನಂತಪುರದಲ್ಲಿರುವ ಲಾಡ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸುಗುತ್ತಿದ್ದ.

ಇದೇ ರೀತಿ ಆತನನ್ನು ನಂಬಿ ಮೋಸ ಹೋದ ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ತನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ ಬಳಿಕ ಆಕೆ ದೂರು ದಾಖಲಿಸಿದ್ದಳು. ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ವಿನೀತ್‌ನನ್ನು ಬಂಧಿಸಿ, ಆತನ ಮೊಬೈಲ್ ವಶಕ್ಕೆ ಪಡೆದಿದ್ದರು. ಇದೀಗ ಆತನ ಮುಖವಾಡ ಬಯಲಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೇರಳ ಪೊಲೀಸರು ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ . 

ಹೊಳೆಯುವುದೆಲ್ಲ ಚಿನ್ನವಲ್ಲ ಎಂಬ ಗಾದೆ ಮಾತಿನ ಮೂಲಕ ಜಾಲತಾಣದಲ್ಲಿ ಇರುವವರೆಲ್ಲ ಸಾಚರಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ . ವಂಚಕರಿರುತ್ತಾರೆ ಎಚ್ಚರಿಕೆ ವಹಿಸಿ , ಇಲ್ಲವಾದಲ್ಲಿ ನಿಮ್ಮ ಮಾನ ಮರ್ಯಾದೆ ಬೀದಿಗೆ ಬೀಳಬಹುದು . ಬಣ್ಣದ ವೇಷ ಹಾಕಿಕೊಂಡು , ವ್ಯಕ್ತಿತ್ವವನ್ನು ಕೊಂದು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಕೆಲ ನಯವಂಚಕರು ಕಾದು ಕುಳಿತಿರುತ್ತಾರೆ . ಹೀಗಾಗಿ ಗೊತ್ತಿಲ್ಲದವರ ಫ್ರೆಂಡ್ ರಿಕ್ವೆಸ್ಟ್‌ಗೆ ಓಕೆ ಅನ್ನಬೇಡ ಅಥವಾ ನಕಲಿ ಪ್ರೊಫೈಲ್‌ಗನ್ನು ಅನುಸರಿಸಬೇಡಿ ಎಂದು ಸಲಹೆ ನೀಡಿದ್ದಾರೆ . 

Ads on article

Advertise in articles 1

advertising articles 2

Advertise under the article