-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರಿಗೆ ಪ್ರಧಾನಿ ಮೋದಿ: ಸಂಚಾರದಲ್ಲಿ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆ, ಸಂಪೂರ್ಣ ಡಿಟೈಲ್ಸ್

ಮಂಗಳೂರಿಗೆ ಪ್ರಧಾನಿ ಮೋದಿ: ಸಂಚಾರದಲ್ಲಿ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆ, ಸಂಪೂರ್ಣ ಡಿಟೈಲ್ಸ್

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸೆ.2ರಂದು ಮಂಗಳೂರಿಗೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಜನರಿಗೆ ಸಮಸ್ಯೆಯಾಗದಂತೆ ಮಂಗಳೂರಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ ವಿವಿಧೆಡೆಗಳಿಂದ ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ 
ಅವರು ಈ ಕುರಿತು ಮಾಹಿತಿ ನೀಡಿ, ಸೆ.2ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಜಂಕ್ಷನ್ ವರೆಗೆ ಸಾಮಾನ್ಯ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಉಳಿದಂತೆ ಮಂಗಳೂರು ನಗರದ 9 ಕಡೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಂತೂರು ಸರ್ಕಲ್ ನಿಂದ ಆಗಮಿಸುವ ವಾಹನಗಳು ಬಿಕರ್ನಕಟ್ಟೆ-ಕೈಕಂಬ ಜಂಕ್ಷನ್ ಬಳಸಲು ಸೂಚನೆ ನೀಡಲಾಗಿದೆ. ಉಡುಪಿಗೆ ತೆರಳಲು ಬಿಕರ್ನಕಟ್ಟೆ ಮೂಲಕ ವಾಮಂಜೂರು- ಗುರುಪುರ- ಮೂಡುಬಿದಿರೆ- ಕಾರ್ಕಳ ರಸ್ತೆ ಬಳಸಬೇಕು. ಮೈಸೂರು, ಮಡಿಕೇರಿ ತೆರಳಲು ಬಿಕರ್ನಕಟ್ಟೆ- ಪಡೀಲ್-ಪುತ್ತೂರು-ಸುಳ್ಯ ಮೂಲಕ ರಸ್ತೆ ಬಳಸಬೇಕು. ಬೆಂಗಳೂರಿಗೆ ತೆರಳುವವರು ಬಿಕರ್ನಕಟ್ಟೆ-ಪಡೀಲ್-ಬಿ.ಸಿ.ರೋಡ್-ಉಪ್ಪಿನಂಗಡಿ ಮೂಲಕ ರಸ್ತೆ ಮೂಲಕ ಸಾಗಬೇಕು.

ಕಾಸರಗೋಡು ಕಡೆಗೆ ಹೋಗುವವರು ಬಿಕರ್ನಕಟ್ಟೆ-ಪಡೀಲ್-ಪಂಪ್‌ ವೆಲ್-ತೊಕ್ಕೊಟ್ಟು ಮೂಲಕ ರಸ್ತೆ ಹೋಗಬಹುದು. ಅದೇ ರೀತಿ ಪೊರ್ಕೋಡಿ ಜಂಕ್ಷನ್ ನಿಂದ ಜೋಕಟ್ಟೆ-ಕಾನಾ-ಸುರತ್ಕಲ್ ಹಾಗೂ ಏರ್ ಪೋರ್ಟ್ ನಿಂದ ಕೈಕಂಬ-ಗುರುಪುರ ಮೂಲಕ ಮಂಗಳೂರಿಗೆ ತೆರಳಬಹುದು. ಮುಲ್ಕಿ ಜಂಕ್ಷನ್ ನಿಂದ ಕಿನ್ನಿಗೋಳಿ-ಕಟೀಲು-ಬಜಪೆ-ಕೈಕಂಬ ಮೂಲಕ ಮಂಗಳೂರಿಗೆ ಬರಬಹುದು. ಹಳೆಯಂಗಡಿಯಿಂದ ಪಕ್ಷಿಕೆರೆ-ಕಿನ್ನಿಗೋಳಿ-ಏರ್ ಪೋರ್ಟ್ ರಸ್ತೆ ಮೂಲಕ ಬರಲು ಅವಕಾಶವಿದ್ದು, ಲೇಡಿಹಿಲ್ ಮೂಲಕ ಪಿವಿಎಸ್-ಬಂಟ್ಸ್ ಹಾಸ್ಟೆಲ್ ಮೂಲಕ ಪಂಪ್ ವೆಲ್ ಗೆ ವಾಹನ ಸಂಚಾರ ಇದೆ. 

ಅಲ್ಲದೆ ಪ್ರಧಾನಿಯವರ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್ ಗೆ 15 ಕಡೆಗಳಲ್ಲಿ ಪೊಲೀಸ್ ಇಲಾಖೆ ಸ್ಥಳ ಗುರುತಿಸಿದೆ ಆ ವಿವರಗಳು ಕೆಳಗಿನಂತಿದೆ.

1) ಡೆಲ್ಟಾ ಗ್ರೌಂಡ್: ಪೊಲೀಸ್ ಪಾಸ್ ಪಡೆದ ವಿವಿಐಪಿ 300 ಕಾರುಗಳ ಪಾರ್ಕಿಂಗ್ 

2) ಸೋಮಯಾಜಿ ಮೈದಾನ ಕೂಳೂರು: ಪೊಲೀಸ್ ಪಾಸ್ ಪಡೆದ 500 ವಿಐಪಿ ಕಾರುಗಳ ಪಾರ್ಕಿಂಗ್

3) ತಣ್ಣೀರು ಬಾವಿ ರಸ್ತೆ ಹಾಗೂ ಪಣಂಬೂರು: ಉಡುಪಿ, ಸುರತ್ಕಲ್, ಕಾವೂರು ಕಡೆಯಿಂದ ಬರುವ ವಾಹನಗಳು- 1500 ಬಸ್ ಗಳು, 500 ಕಾರುಗಳು

4) ಎನ್ಎಂಪಿಎ ಮೈದಾನ, ಪಣಂಬೂರು: ಬಜಪೆ, ಕಾವೂರು ಹಾಗೂ ಉಡುಪಿ ವಾಹನಗಳು - 200 ಬಸ್ ಗಳು, 600 ಬೈಕ್ ಗಳು

5) ಎಂ.ಎಸ್.ಇ.ಝಡ್ ರಸ್ತೆ, ಪಣಂಬೂರು: ಉಡುಪಿ, ಸುರತ್ಕಲ್ ಕಡೆಯ ವಾಹನಗಳು - 1000 ಲಘು ವಾಹನಗಳು

6) ಎ.ಜೆ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜು, ಕೂಳೂರು ಪಂಜಿಮೊಗರು: ಪೊಲೀಸ್ ಪಾಸ್ ಪಡೆದ ವಿಐಪಿ ವಾಹನಗಳ ಪಾರ್ಕಿಂಗ್ 100 ಕಾರುಗಳು

7) ಗೋಲ್ಡ್ ಪಿಂಚ್ ಮೈದಾನದ ಪೂರ್ವ ಭಾಗದ ಅಮೆಜಾನ್ ಗೋಡಾನ್ ಹತ್ತಿರ: ಎಲ್ಲಾ ಭಾಗದ ವಾಹನ ಪಾರ್ಕಿಂಗ್- 2000 ಕಾರುಗಳು ಮತ್ತು 3000 ಬೈಕ್ ಗಳು

8) ಎ.ಜೆ. ಆಸ್ಪತ್ರೆ ಬಳಿಯ ಕುಂಟಿಕಾನದಿಂದ ಕಾವೂರು ಜಂಕ್ಷನ್: ಬೆಳ್ತಂಗಡಿ ಹಾಗೂ ಕಾಸರಗೋಡು ಕಡೆಯ ಬಸ್ ಗಳು- 350 ಬಸ್ ಗಳು

9) ಕೆಪಿಟಿ ಮೈದಾನ: ಮೂಡುಬಿದಿರೆ, ಮುಲ್ಕಿ ತಾಲೂಕಿನ ಬಸ್ ಗಳು- 200 ಬಸ್ ಗಳು

10) ವ್ಯಾಸ ನಗರ ಮೈದಾನ: ಪುತ್ತೂರು ಮತ್ತು ಸುಳ್ಯ ತಾಲೂಕಿನ ಬಸ್ ಗಳು- 50 ಬಸ್ ಗಳು

11) ಪದುವಾ ಮೈದಾನ: ಪುತ್ತೂರು ಮತ್ತು ಸುಳ್ಯ ತಾಲೂಕಿನ ಬಸ್ ಗಳು- 250 ಬಸ್ ಗಳು

12) ಕರಾವಳಿ ಉತ್ಸವ ಮೈದಾನ: ಮಂಗಳೂರು ನಗರ ವ್ಯಾಪ್ತಿಯಿಂದ ಆಗಮಿಸುವ 250 ಬಸ್ ಗಳು

13) ಉರ್ವ ಮಾರುಕಟ್ಟೆ ಮೈದಾನ: ಉಳ್ಳಾಲ ತಾಲ್ಲೂಕು ವ್ಯಾಪ್ತಿಯಿಂದ ಬರುವ 100 ಬಸ್ ಗಳು

14) ಲೇಡಿಹಿಲ್ ಪೊಂಪೈ ಚರ್ಚ್: ಉಳ್ಳಾಲ ತಾಲ್ಲೂಕು ವ್ಯಾಪ್ತಿಯಿಂದ ಬರುವ 100 ಬಸ್ ಗಳು

15) ಉರ್ವಸ್ಟೋರ್ ಮೈದಾನದಿಂದ ಇನ್ಫೋಸಿಸ್ ಹಿಂಭಾಗದ ಕುಂಟಿಕಾನ ರಸ್ತೆಯವರೆಗೆ: ಬಂಟ್ವಾಳ ತಾಲ್ಲೂಕು ವ್ಯಾಪ್ತಿಯಿಂದ ಬರುವ 300 ಬಸ್ ಗಳು

Ads on article

Advertise in articles 1

advertising articles 2

Advertise under the article

ಸುರ