-->
OP - Pixel Banner ad
41.58 ಲಕ್ಷ ನಿವ್ವಳ ಲಾಭ ಗಳಿಸಿದ ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್

41.58 ಲಕ್ಷ ನಿವ್ವಳ ಲಾಭ ಗಳಿಸಿದ ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್

41.58 ಲಕ್ಷ ನಿವ್ವಳ ಲಾಭ ಗಳಿಸಿದ ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್

ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್ ಈ ಬಾರಿ ಭರ್ಜರಿ ಲಾಭ ಗಳಿಸಿ ದಾಖಲೆ ಮಾಡಿದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸರಕಾರಿ ನೌಕರರ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾಗಿರುವ ಹಾಗೂ ವೇತನದಾರರ ಸಹಕಾರಿ ಬ್ಯಾಂಕುಗಳ ಪೈಕಿ ಅಗ್ರಸ್ಥಾನದಲ್ಲಿರುವ ಶತಮಾನದ ಇತಿಹಾಸ ಹೊಂದಿದೆ.ಬ್ಯಾಂಕ್ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ 21.8.2022 ರಂದು ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆಯಲ್ಲಿರುವ ಶ್ರೀ ಭುವನೇಂದ್ರ ಸಭಾಭವನದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.ಬ್ಯಾಂಕು 2021--22 ನೆಯ ಸಾಲಿಗೆ ತೆರಿಗೆಪೂರ್ವ ₹ 55.58 ಲಕ್ಷಗಳಷ್ಟು ಲಾಭ ಗಳಿಸಿದ್ದು ಆದಾಯ ತೆರಿಗೆ ಪಾವತಿಯ ನಂತರ ನಿವ್ವಳ ₹ 41.58 ಲಕ್ಷ ಲಾಭ ಗಳಿಸಿರುತ್ತದೆ.


ಮಹಾಸಭೆಯ ಪ್ರಾರಂಭಕ್ಕೂ ಮೊದಲು ಠೇವಣಿದಾರರ ಜೊತೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರಗಿತು. ಬಳಿಕ ಬ್ಯಾಂಕಿನ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 


ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಶೇರಿಗಾರ್ ಹಾಗೂ ಬ್ಯಾಂಕಿನ ಮಾಜಿ ನಿರ್ದೇಶಕರಾದ ಶ್ರೀ ಎಸ್. ನಿರಂಜನ ಮೂರ್ತಿ ಉಪಸ್ಥಿತರಿದ್ದರು.ಮಹಾಸಭೆಯ ಕಾರ್ಯಸೂಚಿಗಳನ್ನು ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲಕ್ಷ್ಮೀಶ ಎನ್. ಮಂಡಿಸಿದರು.ಬ್ಯಾಂಕಿನ ಸದಸ್ಯರಿಗೆ ಅನುಕೂಲವಾಗುವಂತೆ ಸದಸ್ಯರ ಜಾಮೀನು ಸಾಲಗಳ ಮೇಲಿನ ಬಡ್ಡಿಯನ್ನು 9.65% ಕ್ಕೆ ಹಾಗೂ ಚಿನ್ನಾಭರಣಗಳ ಮೇಲಿನ ಸಾಲದ ಬಡ್ಡಿ ದರವನ್ನು 8.5% ಕ್ಕೆ ಇಳಿಕೆ ಮಾಡಿ ನಿಗದಿಪಡಿಸಲಾಗಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.


ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ತಿಲೋತ್ತಮ ನವೀನ್, ಹಾಗೂ ನಿರ್ದೇಶಕರುಗಳಾದ ಶ್ರೀ ಪದ್ಮನಾಭ ಜೋಗಿ; ಶ್ರೀಮತಿ ಸುಜಾತಾ, ಶ್ರೀಮತಿ ಶಶಿಕಲಾ, ಶ್ರೀ ಅಕ್ಷಯ್ ಭಂಡಾರ್ ಕಾರ್; ಶ್ರೀ ಜಗದೀಶ್ ಪಿ.; ಶ್ರೀ ಎ. ಫ್ರಾಂಕಿ ಕುಟಿನ್ಹಾ; ಶ್ರೀ ಶಿವಾನಂದ ಎಂ. ಶ್ರೀ ಪ್ರದೀಪ್ ಡಿ' ಸೋಜಾ, ಮತ್ತು ಶ್ರೀ ಶಮಂತ್ ಕುಮಾರ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242