-->

BIGGBOSS OTT -ಉದಯ್ ಸೂರ್ಯ ಔಟ್!! ಅವರ ಈ ವರ್ತನೆಯಿಂದ ಕಿಕ್ ಔಟ್ ಆದ್ರ ಉದಯ್!!

BIGGBOSS OTT -ಉದಯ್ ಸೂರ್ಯ ಔಟ್!! ಅವರ ಈ ವರ್ತನೆಯಿಂದ ಕಿಕ್ ಔಟ್ ಆದ್ರ ಉದಯ್!!


ಬಿಗ್ ಬಾಸ್​ ಕನ್ನಡ ಒಟಿಟಿಯಿಂದ ಉದಯ್ ಸೂರ್ಯ ಔಟ್ ಆಗಿದ್ದಾರೆ. ಈ ಮೂಲಕ ದೊಡ್ಮನೆ ಸೇರಿದ್ದ 16 ಮಂದಿಯಲ್ಲಿ ಈಗ 11 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. 

ಕಿಚ್ಚ ಸುದೀಪ್ ಅವರು ಪ್ರತಿ ವಾರ ನಿರೂಪಣೆ ಮಾಡುತ್ತಾರೆ. ಟಿವಿ ಸೀಸನ್​ಗಳಲ್ಲಿ ಭಾನುವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಒಟಿಟಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದೆ. ಶನಿವಾರವೇ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಉದಯ್ ಹೊರ ಹೋಗುತ್ತಿರುವ ಬಗ್ಗೆ ಸುದೀಪ್ ಘೋಷಣೆ ಮಾಡಿದರು. ಈ ಮೂಲಕ ಮೂರನೇ ವಾರಕ್ಕೆ ಉದಯ್ ಪ್ರಯಾಣ ಮುಗಿಸಿದ್ದಾರೆ.

ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ಈ ವಾರದ ನಾಮಿನೇಷನ್ ಆಗಿತ್ತು. ಆ ಪೈಕಿ ಆರ್ಯವರ್ಧನ್ ಗುರೂಜಿ ಮೊದಲು ಸೇವ್ ಆದರು. ಆ ಬಳಿಕ ರೂಪೇಶ್​ ಶೆಟ್ಟಿ, ಸೋಮಣ್ಣ, ಅಕ್ಷತಾ, ಚೈತ್ರಾ, ಜಯಶ್ರೀ ಉಳಿದುಕೊಂಡರು. ಕೊನೆಯಲ್ಲಿ ಉದಯ್ ಎಲಿಮಿನೇಟ್ ಆಗಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಉದಯ್​ ಸೂರ್ಯ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದರು. ಕೆಲವರ ಬಗ್ಗೆ ಅವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ, ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಿದ್ದಾರೆ ಎಂಬ ಆರೋಪ ಬಂತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಇಡೀ ಮನೆಯವರು ಉದಯ್ ವಿರುದ್ಧ ತಿರುಗಿ ಬಿದ್ದರು. ಇನ್ನು, ಮನೆಯಲ್ಲಿ ಅವರು ಡಬಲ್​ಗೇಮ್ ಆಡುತ್ತಿದ್ದರು ಎಂಬ ಆರೋಪ ಕೂಡ ಇದೆ. ಇದರಿಂದ ಕೂಡ ಅವರಿಗೆ ಹಿನ್ನಡೆ ಆಗಿದೆ.

Ads on article

Advertise in articles 1

advertising articles 2

Advertise under the article