
ಮಂಗಳೂರು: ಹತ್ಯೆ ಪ್ರಕರಣ ಬೇಧಿಸಲು ಆ.5ರವರೆಗೆ ಗಡುವು, ಇಲ್ಲದಿದ್ದಲ್ಲಿ ಮಂಗಳೂರಿನಲ್ಲಿ ಧರಣಿ; ಕುಮಾರಸ್ವಾಮಿ
8/01/2022 06:46:00 AM
ಮಂಗಳೂರು: ದ.ಕ.ಜಿಲ್ಲೆಯ ಮೂರು ಹತ್ಯೆ ಪ್ರಕರಣವನ್ನು ಭೇದಿಸಿ ನಿಜವಾದ ಹಂತಕರನ್ನು ಬಂಧಿಸಲು ಸರ್ಕಾರಕ್ಕೆ ಆಗಸ್ಟ್ 5ರವರೆಗೆ ಗಡುವು ಕೊಡ್ತೇನೆ. ಆ ಬಳಿಕವೂ ಯಾವುದೇ ಪ್ರಗತಿಯಾದಿದ್ದಲ್ಲಿ ಮಂಗಳೂರಿನಲ್ಲಿ ಶಾಂತಿಯುತ ಧರಣಿ ನಡೆಸುತ್ತೇನೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಜ ಆರೋಪಿಗಳ ಬಂಧನವಾಗಿ, ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರಕಲಿ ಎಂದು ಹೇಳಿದರು.
ದ.ಕ.ಜಿಲ್ಲೆಗೆ ಡಿಜಿಪಿಯವರು ಆಗಮಿಸಿ ಏನು ಸಂದೇಶ ಕೊಡಲು ಬಂದಿದ್ದಾರೆ. ಅವರು ಹತ್ಯೆಯಾದವರ ಮನೆಗೆ ಹೋಗದೆ, ಕಾಟಾಚಾರಕ್ಕೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅವರಿಗೆ ಜವಾಬ್ದಾರಿ ಇದ್ದಿದ್ದಲ್ಲಿ ಅವರು ಹತ್ಯೆಯಾದ ದಿನವೇ ಜಿಲ್ಲೆಗೆ ಆಗಮಿಸುತ್ತಿದ್ದರು. ಇದರಲ್ಲಿ ನಾಯಕರ ರಾಜಕೀಯ ಹಸ್ತಕ್ಷೇಪ ಇದೆಯೇ ಗೊತ್ತಿಲ್ಲ. ಆದರೆ ಎರಡೂ ರಾಜಕೀಯ ಪಕ್ಷಗಳು ಗಲಭೆ ಎಬ್ಬಿಸಿ ರಾಜಕೀಯ ಫಸಲು ತೆಗೀತಿದೆ ಎಂದು ಹೇಳಿದರು.