ಸಂಸತ್ ಕಲಾಪದ ವೇಳೆ 2 ಲಕ್ಷ ರೂ. ಮೌಲ್ಯದ ಬ್ಯಾಗ್‌ ಬಚ್ಚಿಟ್ಟ ಮಹುವಾ ಮೊಯಿತ್ರಾ !

ನವದೆಹಲಿ: ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮಲ್ಲಿದ್ದ ಬೆಲೆಬಾಳುವ ಬ್ಯಾಗ್‌ ಅನ್ನು ಅಡಗಿಸಿಟ್ಟಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸಂಸತ್ ಕಲಾಪದಲ್ಲಿ ಮತ್ತೊಬ್ಬ ಟಿಎಂಸಿ ಸಂಸದೆ ಕಾಕೋಲಿ ಘೋಷ್‌ ದಸ್ತಿದಾರ್‌, ಬೆಲೆಯೇರಿಕೆ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಅವರ ಪಕ್ಕದಲ್ಲಿಯೇ ಕುಳಿತಿದ್ದ ಮಹುವಾ ಮೊಹಿತ್ರಾ, ದಿಢೀರನೆ ಜಾಗೃತರಾಗಿ ತಮ್ಮ ಪಕ್ಕದಲ್ಲೇ ಇದ್ದ ಅಂದಾಜು 2 ಲಕ್ಷ ರೂ. ಮೌಲ್ಯದ ಲೂಯಿಸ್‌ ವಿಟಾನ್ ಬ್ರಾಂಡ್‌ನ‌ ವ್ಯಾನಿಟಿ ಬ್ಯಾಗನ್ನು ತಮ್ಮ ಆಸನದ ಕೆಳಕ್ಕೆ ಬಚ್ಚಿಟ್ಟಿದ್ದಾರೆ!

ಇದೀಗ ಈ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಈಗ ಮೆಹುವಾ ಮೊಯಿತ್ರಾ ಅವರೆಡೆ ಬೆರಳು ತೋರಿಸಿ ತಮಾಷೆ ಮಾಡಿದ್ದಾರೆ.