-->
ಮಂಗಳೂರು: ನಿಯಮ ಮೀರಿ ಕಾರ್ಯಾಚರಿಸಿದ 16 ಫಿಶ್ ಮೀಲ್ ಗಳು ಸ್ಥಗಿತ!

ಮಂಗಳೂರು: ನಿಯಮ ಮೀರಿ ಕಾರ್ಯಾಚರಿಸಿದ 16 ಫಿಶ್ ಮೀಲ್ ಗಳು ಸ್ಥಗಿತ!

ಮಂಗಳೂರು: ನಿಯಮ ಉಲ್ಲಂಘನೆ ಮಾಡಿ ಕಾರ್ಯಚರಿಸಿರುವ ಹಿನ್ನೆಲೆಯಲ್ಲಿ ಜಲ ಹಾಗೂ ವಾಯು ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯನ್ವಯ ಉಳ್ಳಾಲದ 13 ಹಾಗೂ ಮುಕ್ಕದ 13 ಸೇರಿದಂತೆ ಒಟ್ಟು 16 ಫಿಶ್ ಮೀಲ್ ಕಾರ್ಖಾನೆಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಸ್ಥಗಿತಗೊಳಿಸಲಾಗಿದೆ.

ನಿಯಮ‌ ಉಲ್ಲಂಘಿಸಿರುವ ಪರಿಸರಕ್ಕೆ ಮಾರಕವಾಗಿರುವ, ಗಬ್ಬುನಾತ ಬೀರುವ ಫಿಶ್ ಮೀಲ್ ಗಳನ್ನು ಮುಚ್ಚುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಡಿಸಿಯವರಿಗೆ ಆದೇಶಿಸಿದ್ದರು. ಅದರಂತೆ 16 ಫಿಶ್ ಮೀಲ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಫಿಶ್ ಮಿಲ್‌ಗಳಿಗೆ ಒದಗಿಸಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂ ಎಂಡಿಗೂ ಸೂಚನೆ ನೀಡಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ಪಾಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ತಹಶೀಲ್ದಾರ್‌ಗೆ ಹಾಗೂ ಮೆಸ್ಕಾಂ ಎಂಡಿಗೆ ಸೂಚನೆ ನೀಡಲಾಗಿದೆ. 

ಅದರಂತೆ ಎರಡೂ ಕಡೆ ಸ್ಥಳೀಯ ಕಂದಾಯ ನಿರೀಕ್ಷಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಉಳ್ಳಾಲದ 13 ಮತ್ತು ಮುಕ್ಕದ 3 ಫಿಶ್ ಮೀಲ್  ಕಾರ್ಖಾನೆಗಳನ್ನು ಸ್ಥಗಿತಗೊಳಿಸಿದ್ದಾರೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಫಿಶ್ ಮೀಲ್ ಕಾರ್ಖಾನೆಯ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವುದಕ್ಕಿಂತ ಮೊದಲು ಅದನ್ನು ಶುದ್ಧೀಕರಿಸಲು ಬಯೋ ಫಿಲ್ಟರ್ ಯಂತ್ರ ಅಳವಡಿಸಲು ಸೂಚಿಸಲಾಗಿತ್ತು. ಆದರೆ ಈ ನಿಯಮಗಳನ್ನು ಫಿಶ್ ಮೀಲ್ ಕಾರ್ಖಾನೆಗಳು ಅನುರಿಸಿರಲಿಲ್ಲ. ಆದ್ದರಿಂದ ಈ ಫಿಶ್ ಮೀಲ್ ಕಾರ್ಖಾನೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಲಾಗಿತ್ತು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article