Sullia ಕಾಣಿಯೂರಿನಲ್ಲಿ ಹರಿಯುವ ಹೊಳೆಗೆ ಬಿದ್ದ ಕಾರು : ಸಿಸಿಟಿವಿಯಲ್ಲಿ ಅವಘಡದ ದೃಶ್ಯ ಸೆರೆ
Sunday, July 10, 2022
ಕಾಣಿಯೂರು: ಮಧ್ಯರಾತ್ರಿ ಭಾರೀ ವೇಗವಾಗಿ ಬಂದು ಉಕ್ಕಿಹರಿಯುವ ಹೊಳೆಗೆ ಕಾರೊಂದು ಬಿದ್ದ ಘಟನೆ ಮಂಜೇಶ್ವರ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿಯ ಸಮೀಪ ನಡೆದಿದೆ.
ಹೌದು ಗೌರಿಹೊಳೆಯಲ್ಲಿ ಕಾರು ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಇನ್ನು ಶನಿವಾರ ಮಧ್ಯರಾತ್ರಿ 12 ಗಂಟೆ ಸಮಯಕ್ಕೆ ಅವಘಡ ಸಂಭವಿಸಿದೆ.
ಕಾರು ಪುತ್ತೂರಿನಿಂದ ಕಾಣಿಯೂರು ಕಡೆ ಸಂಚರಿಸುತಿದ್ದು ಅಪಘಾತಗೊಂಡ ಕಾರಿನ ಬೋನೆಟ್ ಒಂದು ಭಾಗ ಸಿಕ್ಕಿದ್ದು, ಅದು ಮಾರುತಿ 800 ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಈ ಅಪಘಾತದ ವೇಗಕ್ಕೆ ಸೇತುವೆಯ ತಡೆಭೇಲಿಯ ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ. ಬೆಳ್ಳಂಬೆಳಗ್ಗೆ ಅಪಾರ ಜನ ಸೇರಿ ನದಿಯ ಇಕ್ಕೆಲಗಳಲ್ಲಿ ಹುಡುಕಾಟ ನಡೆಸಿದರೂ ಕಾರು ಪತ್ತೆಯಾಗಿಲ್ಲ. ಕಾರಿನಲ್ಲಿ ಎಷ್ಟು ಜನ ಇದ್ದರೂ, ಕಾರು ಯಾರದ್ದು ಎನ್ನುವ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿದ್ದಾರೆ.