-->

ಅಂಚೆ ಕಚೇರಿ, SBI, HDFC, ICICI ಬ್ಯಾಂಕ್: ಆರ್‌ಡಿಗೆ ಎಲ್ಲಿ ಅಧಿಕ ಬಡ್ಡಿ ದರ ?

ಅಂಚೆ ಕಚೇರಿ, SBI, HDFC, ICICI ಬ್ಯಾಂಕ್: ಆರ್‌ಡಿಗೆ ಎಲ್ಲಿ ಅಧಿಕ ಬಡ್ಡಿ ದರ ?

ಅಂಚೆ ಕಚೇರಿ, SBI, HDFC, ICICI ಬ್ಯಾಂಕ್: ಆರ್‌ಡಿಗೆ ಎಲ್ಲಿ ಅಧಿಕ ಬಡ್ಡಿ ದರ ?






RBI ಹಣದುಬ್ಬರದ ನಡುವೆ ರೆಪೋ ದರ ಹೆಚ್ಚಿಸಿದ ಬಳಿಕ 2022ರ ಏಪ್ರಿಲ್‌ನಿಂದ MCLR ಅನ್ನು ಏರಿಕೆ ಮಾಡಲಾಗಿದೆ. ಈ ಹಿಂದೆ 2022ರ ಜೂನ್ 15ರಿಂದ ಜಾರಿಗೆ ಬರುವಂತೆ MCLR ಅನ್ನು ಶೇಕಡ 0.20ರಷ್ಟು ಏರಿಕೆ ಮಾಡಿತ್ತು.



ಕಳೆದ ವರ್ಷ ಬಾಹ್ಯ ಬೆಂಚ್‌ಮಾರ್ಕ್ ಆಧಾರಿತ ಸಾಲದ ಬಡ್ಡಿದರವು ಜೂನ್ 2022ರಿಂದ ಏರಿಕೆ ಮಾಡಲಾಗಿದೆ.



ಆದರೂ ಗ್ರಾಹಕರ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಅವರ ಸಾಲದ ಬಡ್ಡಿದರ ನಿರ್ಧರಿಸಲಾಗುತ್ತದೆ. ಈಗ ಬಡ್ಡಿ ದರ ಏರಿಕೆ ಕಾರಣಕ್ಕಾಗಿ, ಸಿಬಿಲ್ ಕ್ರೆಡಿಟ್ ಸಂಖ್ಯೆ 800 ದಾಟಿದ್ದರೆ, ಅಂತಹ ಗ್ರಾಹಕರ ಗೃಹ ಸಾಲಕ್ಕೆ ಕನಿಷ್ಠ 7.55% ಬಡ್ಡಿ ದರ ವಿಧಿಸಲಾಗುತ್ತದೆ.



ಹೂಡಿಕೆ ವಿಚಾರಕ್ಕೆ ಬಂದಾಗ ಯಾವಾಗಲೂ ಸುರಕ್ಷತೆ ಅತಿ ಮುಖ್ಯ. ಹೆಚ್ಚಾಗಿ ನಾವು ಫಿಕ್ಸೆಡ್ ಡೆಪಾಸಿಟ್ (FD) ಹಾಗೂ ರಿಕರಿಂಗ್ ಡೆಪಾಸಿಟ್ (RD) ನಲ್ಲಿ ಹೂಡಿಕೆ ಮಾಡುವುದು ಸೂಕ್ತ ಮತ್ತು ಸುರಕ್ಷಿತ... 


 ನಮ್ಮಲ್ಲಿ ಅಧಿಕ ಹಣ ಇದೆ ಎಂದಾದರೆ ನಾವು FDನಲ್ಲಿ ಹೂಡಿಕೆ ಮಾಡಬಹುದು. ಆದರೆ ಪ್ರತಿ ತಿಂಗಳು ಹೂಡಿಕೆ ಮಾಡಿ ಹಣವನ್ನು ಉಳಿತಾಯ ಮಾಡಲು ಬಯಸಿದರೆ ಆಗ RD ಉತ್ತಮ ಆಯ್ಕೆ ಆಗಿದೆ. 


ರಿಕರಿಂಗ್ ಡೆಪಾಸಿಟ್ - RDಯಲ್ಲಿ ಹಣ ಹೂಡುವುದು.. ಯೋಜನೆಯ ಕೊನೆಗೆ ದೊಡ್ಡ ಮೊತ್ತದ ಹಣ ಪಡೆಯುವುದು ಇದರ ಮೂಲ ದ್ಯೇಯ. ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಈ ಯೋಜನೆ ಮೇಲೆ ಆಕರ್ಷಕ ಬಡ್ಡಿದರ ನೀಡುತ್ತದೆ. RDಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತದ ಡೆಪಾಸಿಟ್ ಮಾಡಬೇಕು.



FD, RD ಹಾಗೂ PPF ಬಡ್ಡಿ ಆದಾಯಕ್ಕೆ ತೆರಿಗೆ ಲೆಕ್ಕಾಚಾರ...


ನವೀನ ತಂತ್ರಜ್ಞಾನದ ಹಿನ್ನೆಲೆಯಲ್ಲಿ ನಾವು ಪ್ರತಿ ತಿಂಗಳು ನಮ್ಮ ಖಾತೆಯಿಂದಲೇ ಆರ್‌ಡಿ ಹಣ ಕಟ್ ಆಗುವಂತೆ ಮಾಡಬಹುದು. ಯೋಜನೆಯ ಕೊನೆಗೆ ನಾವು ಹೂಡಿಕೆ ಮಾಡಿದ ಮೊತ್ತದ ಜೊತೆಯಲ್ಲಿ ಬಡ್ಡಿದರವನ್ನೂ ನಾವು ಪಡೆಯಬಹುದು.



ಆದರೆ ಹೂಡಿಕೆ ಎಲ್ಲಿ?

ಯಾವ ಕಡೆ ಅಧಿಕ ಬಡ್ಡಿದರ ಸಿಗುತ್ತದೆ ಎಂಬ ಬಗ್ಗೆ ಹಲವರಿಗೆ ಗೊಂದಲಗಳು ಇದೆ. ಆದ್ದರಿಂದ ಅಂಚೆ ಕಚೇರಿ, SBI, HDFC, ICICI ಬ್ಯಾಂಕ್‌ ಆರ್‌ಡಿ ಬಡ್ಡಿದರವನ್ನು ಇಲ್ಲಿ ನೀಡಲಾಗಿದೆ.



ಅಂಚೆ ಕಚೇರಿ


ರಿಕರಿಂಗ್ ಡೆಪಾಸಿಟ್- ಆರ್‌ಡಿ ಬಡ್ಡಿದರ ಈ ಹಣಕಾಸು ವರ್ಷದಲ್ಲಿ ಜುಲೈ -ಸೆಪ್ಟೆಂಬರ್ ಅವಧಿಗೆ ಅಂಚೆ ಕಚೇರಿ ಆರ್‌ಡಿ ಲಭ್ಯವಿದೆ. ಈ ಯೋಜನೆಯ ಅವಧಿ ಬರೋಬ್ಬರಿ 5 ವರ್ಷಗಳು.. ಅಂದರೆ 60 ತಿಂಗಳು. ಪೋಸ್ಟ್ ಆಫೀಸ್‌ನಲ್ಲಿ ಆರ್‌ಡಿ ಮೇಲೆ ಶೇ. 5.8 ಬಡ್ಡಿದರ ನೀಡಲಾಗುತ್ತದೆ.



ಪೋಸ್ಟ್ ಆಫೀಸ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ರಿಕರಿಂಗ್ ಡೆಪಾಸಿಟ್- ಆರ್‌ಡಿ ಯನ್ನು ಮತ್ತೆ 5 ವರ್ಷಗಳ ಕಾಲ ವಿಸ್ತರಿಸಬಹುದು. -ಆರ್‌ಡಿ ಖಾತೆಯನ್ನು ತೆರೆದ ಸಂದರ್ಭದಲ್ಲಿ ಎಷ್ಟು ಬಡ್ಡಿದರ ಇತ್ತೋ ಅದೇ ಬಡ್ಡಿ ದರ ವಿಸ್ತೃತ ಅವಧಿಗೂ ಜಾರಿಯಾಗುತ್ತದೆ.


HDFC ಎಫ್‌ಡಿ, RD ಬಡ್ಡಿ ದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?

HDFC ಬ್ಯಾಂಕ್ RD ಬಡ್ಡಿ ದರ ಆರು ತಿಂಗಳಿನಿಂದ 120 ತಿಂಗಳವರೆಗಿನ ಆರ್‌ಡಿಯನ್ನು HDFC ಬ್ಯಾಂಕ್ ಹೊಂದಿದೆ. ಇದರ ಬಡ್ಡಿ ದರ ಶೇ. 3.75ರಿಂದ ಶೇ. 5.75ರ ನಡುವೆ ಇರಲಿದೆ.


5 ವರ್ಷದ (60 ತಿಂಗಳು) RD ಮೇಲೆ HDFC ಬ್ಯಾಂಕ್ ಶೇಕಡ 6.70ರಷ್ಟು ಬಡ್ಡಿದರವನ್ನು ನೀಡುತ್ತದೆ.

#6 ತಿಂಗಳು-: ಶೇಕಡ 3.75, ಹಿರಿಯ ನಾಗರಿಕರು ಶೇ. 4.25

#9 ತಿಂಗಳು-: ಶೇಕಡ 4.65, ಹಿರಿಯ ನಾಗರಿಕರು ಶೇ. 5.15

-#12 ತಿಂಗಳು-: ಶೇಕಡ 5.35, ಹಿರಿಯ ನಾಗರಿಕರು ಶೇ. 5.85

-#15 ತಿಂಗಳು-: ಶೇಕಡ 5.35, ಹಿರಿಯ ನಾಗರಿಕರು ಶೇ 5.85

-#24 ತಿಂಗಳು-: ಶೇಕಡ 5.35, ಹಿರಿಯ ನಾಗರಿಕರು ಶೇ 5.85

-#27 ತಿಂಗಳು-: ಶೇಕಡ 5.50, ಹಿರಿಯ ನಾಗರಿಕರು ಶೇ 6.00

-#36 ತಿಂಗಳು-: ಶೇಕಡ 5.50, ಹಿರಿಯ ನಾಗರಿಕರು ಶೇ 6.00

-#39 ತಿಂಗಳು-: ಶೇಕಡ 5.70, ಹಿರಿಯ ನಾಗರಿಕರು ಶೇ 6.20

-#48 ತಿಂಗಳು-: ಶೇಕಡ 5.70, ಹಿರಿಯ ನಾಗರಿಕರು ಶೇ 6.20

-#60 ತಿಂಗಳು-: ಶೇಕಡ 5.70, ಹಿರಿಯ ನಾಗರಿಕರು ಶೇ 6.20

-#90 ತಿಂಗಳು-: ಶೇಕಡ 5.75, ಹಿರಿಯ ನಾಗರಿಕರು ಶೇ 6.50

-#120 ತಿಂಗಳು-: ಶೇಕಡ 5.75, ಹಿರಿಯ ನಾಗರಿಕರು ಶೇ 6.50


ICICI ಬ್ಯಾಂಕ್ ಆರ್‌ಡಿ ಬಡ್ಡಿದರ

6 ತಿಂಗಳಿನಿಂದ 10 ವರ್ಷದ ಅವಧಿವರೆಗಿನ ಆರ್‌ಡಿಯನ್ನು ICICI ಬ್ಯಾಂಕ್ ಹೊಂದಿದೆ.

ಮೂರರಿಂದ ಐದು ವರ್ಷದ ಅವಧಿಯ ಆರ್‌ಡಿ ಮೇಲೆ ICICI ಬ್ಯಾಂಕ್‌ನಲ್ಲಿ ಶೇಕಡ 5.70ರಷ್ಟು ಬಡ್ಡಿ ದರ ವಿಧಿಸಲಾಗುತ್ತದೆ. 


ಅಧಿಕ ಅವಧಿಗಾದರೆ, ಆರ್.ಡಿ. ಮೇಲೆ 5.75%ದಷ್ಟು ಬಡ್ಡಿ ದರ ನೀಡಲಾಗುತ್ತದೆ.


-#6 ತಿಂಗಳು-: ಶೇಕಡ 3.75, ಹಿರಿಯ ನಾಗರಿಕರು ಶೇಕಡ 4.25

-#9 ತಿಂಗಳು-: ಶೇಕಡ 4.65, ಹಿರಿಯ ನಾಗರಿಕರು ಶೇಕಡ 5.15

-#12 ತಿಂಗಳು-: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85

-#15 ತಿಂಗಳು-: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85

-# ಒಂದೂವರೆ ವರ್ಷ (18 ತಿಂಗಳು)-: 5.35 %, ಹಿರಿಯ ನಾಗರಿಕರು 5.85 %

-#21 ತಿಂಗಳು-: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85

-#24 ತಿಂಗಳು-: ಶೇಕಡ 5.35, ಹಿರಿಯ ನಾಗರಿಕರು ಶೇಕಡ 5.85

-#27 ತಿಂಗಳು-: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00

-#30 ತಿಂಗಳು-: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00

-#33 ತಿಂಗಳು-: ಶೇಕಡ 5.50, ಹಿರಿಯ ನಾಗರಿಕರು ಶೇಕಡ 6.00

-#ಮೂರು ವರ್ಷ- : 5.50% , ಹಿರಿಯ ನಾಗರಿಕರು ಶೇಕಡ 6.00 %

-# 3 ವರ್ಷ 1 ದಿನದಿಂದ 5 ವರ್ಷ ವರೆಗೆ-: ಶೇ. 5.70, ಹಿರಿಯ ನಾಗರಿಕರು 6.20 %

-# 5 ವರ್ಷ 1 ದಿನದಿಂದ 10 ವರ್ಷ ವರೆಗೆ-: ಶೇ. 5.75, ಹಿರಿಯ ನಾಗರಿಕರು 6.50 %


SBI ಆರ್‌ಡಿ ಬಡ್ಡಿದರ

#7 ದಿನದಿಂದ 45 ದಿನ: ಶೇಕಡ 2.90,

#ಹಿರಿಯ ನಾಗರಿಕರು ಶೇಕಡ 3.40

#46 ದಿನದಿಂದ 179 ದಿನ: ಶೇಕಡ 3.90,

#ಹಿರಿಯ ನಾಗರಿಕರು ಶೇಕಡ 4.40

#180 ದಿನದಿಂದ 210 ದಿನ: ಶೇಕಡ 4.40,

#ಹಿರಿಯ ನಾಗರಿಕರು ಶೇಕಡ 4.90

#211 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇಕಡ 4.60,

#ಹಿರಿಯ ನಾಗರಿಕರು ಶೇಕಡ 5.10

#1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ: ಶೇಕಡ 5.30

#ಹಿರಿಯ ನಾಗರಿಕರು ಶೇಕಡ 5.80

#2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: ಶೇಕಡ 5.35

#ಹಿರಿಯ ನಾಗರಿಕರು ಶೇಕಡ 5.85

#3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ: ಶೇಕಡ 5.45,

#ಹಿರಿಯ ನಾಗರಿಕರು ಶೇಕಡ 5.95

#5 ವರ್ಷದಿಂದ 10 ವರ್ಷದವರೆಗೆ: ಶೇಕಡ 5.50,

#ಹಿರಿಯ ನಾಗರಿಕರು ಶೇಕಡ 6.30

Ads on article

Advertise in articles 1

advertising articles 2

Advertise under the article