-->

Puttur:-ಹೆಬ್ಬಾವನ್ನು ಕೊಂದು ಅರಣ್ಯ ಇಲಾಖೆಯ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿ ವಿಕೃತಿ. ಗ್ರಾ.ಪಂ ಸಿಬ್ಬಂದಿ ಸಹಿತ ಇಬ್ಬರ ಬಂಧನ.

Puttur:-ಹೆಬ್ಬಾವನ್ನು ಕೊಂದು ಅರಣ್ಯ ಇಲಾಖೆಯ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿ ವಿಕೃತಿ. ಗ್ರಾ.ಪಂ ಸಿಬ್ಬಂದಿ ಸಹಿತ ಇಬ್ಬರ ಬಂಧನ.

ಹೆಬ್ಬಾವನ್ನು ಕೊಂದು ಅರಣ್ಯ ಇಲಾಖೆಯ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿದ ಆರೋಪದಡಿ ಗ್ರಾ. ಪಂ ಸಿಬ್ಬಂದಿ ಸಹಿತ  ಇಬ್ಬರನ್ನು ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಕೊಳ್ತಿಗೆ ಗ್ರಾಮದ ಶೇಡಿಗುರಿ ವಾಸಿ ಧನಂಜಯ(38 ವರ್ಷ) ಮತ್ತು ಗ್ರಾ. ಪಂ ಸಿಬ್ಬಂದಿ  ಜಯ(38 ವರ್ಷ) ಬಂಧಿತರು. ಅರಣ್ಯ ಇಲಾಖೆ ಅಧಿಕಾರಿ ಗಳು ಇವರನ್ನು  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು . ನ್ಯಾಯಾಲಯವು ಇವರಿಗೆ ಜುಲೈ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮನೆ ಬಳಿ ಬಂದಿದ್ದ ಹೆಬ್ಬಾವನ್ನು ಆರೋಪಿಗಳು ಹಿಡಿದು ಕಟ್ಟಡದ ಬಾಗಿಲ ಬೀಗಕ್ಕೆ ಕಟ್ಟಿದ್ದು ಇದರಿಂದ ಹಾವು ಮೃತಪಟ್ಟಿದೆ. ಹೆಬ್ಭಾವನ್ನು ಕೊಲ್ಲುವುದು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಜಾಮೀನು ರಹಿತ ಅಪರಾಧವಾಗುತ್ತದೆ.

ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ Y K ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ V P ಕಾರ್ಯಪ್ಪ ರವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿಗಳಾದ ಕಿರಣ್ ಬಿ. ಎಮ್. ಉಪ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ್ S .N ಅರಣ್ಯ ರಕ್ಷಕರುಗಳಾದ ದೀಪಕ ,ನಿಂಗರಾಜ್ ಮತ್ತು ಇಲಾಖೆ ವಾಹನ ಚಾಲಕರಾದ ಜಗದೀಶ್ ಪಾಲ್ಗೊಂಡಿದ್ದರು. ತನಿಖೆ ಪ್ರಗತಿಯಲ್ಲಿದೆ.

Ads on article

Advertise in articles 1

advertising articles 2

Advertise under the article