-->
ಯುವತಿಯ ರುಂಡ ಕಡಿದು ಠಾಣೆಗೆ ತಂದಿದ್ದ ಪಾಗಲ್ ಪ್ರೇಮಿ ಮೇಲೆ ಮತ್ತೊಂದು ಪ್ರಕರಣ ದಾಖಲು!

ಯುವತಿಯ ರುಂಡ ಕಡಿದು ಠಾಣೆಗೆ ತಂದಿದ್ದ ಪಾಗಲ್ ಪ್ರೇಮಿ ಮೇಲೆ ಮತ್ತೊಂದು ಪ್ರಕರಣ ದಾಖಲು!

ವಿಜಯನಗರ: ಇಲ್ಲಿನ ಕೂಡ್ಲಿಗಿ ತಾಲೂಕಿನ ಕನ್ನಬೋರಯ್ಯಹಟ್ಟಿಯಲ್ಲಿ ತನ್ನನ್ನು ವಿವಾಹವಾಗಿಲ್ಲ ಎಂಬ ಕೋಪಕ್ಕೆ ಯುವತಿಯ ರುಂಡವನ್ನೇ ಕಡಿದು ಠಾಣೆಗೆ ತಂದಿದ್ದ ಪಾಗಲ್ ಪ್ರೇಮಿಯ ಮೇಲೆ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. 

ಆರೋಪಿ ಭೋಜರಾಜ್ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದಾನೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಬಾಲ್ಯ ವಿವಾಹ ಕಾಯ್ದೆ ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿ ಭೋಜರಾಜನ ಹೆತ್ತವರು ಹಾಗೂ ಬಾಲಕಿಯ ತಂದೆ - ತಾಯಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಖಾನಾಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆಯ ಹೇಳಿಕೆಯ ಆಶಾರದ ಮೇಲೆ ತನಿಖೆ ಮುಂದುವರೆಸಲಾಗುತ್ತದೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಹೇಳಿಕೆ ನೀಡಿದ್ದಾರೆ 

ಕೆಲ ದಿನಗಳ ಹಿಂದೆಯಷ್ಟೇ ಆರೋಪಿ ಭೋಜರಾಜ, ತನ್ನನ್ನು ವಿವಾಹವಾಗಿಲ್ಲ ಎಂಬ ಕಾರಣಕ್ಕೆ ನಿರ್ಮಾಲ ಎಂಬ ಯುವತಿಯ ರುಂಡವನ್ನೇ ಕತ್ತರಿಸಿ ರುಂಡ ಸಹಿತ ಠಾಣೆಗೆ ಹಾಜರಾಗಿದ್ದ.

ಭೋಜರಾಜ ನಿರ್ಮಲಾಳನ್ನು ಪ್ರೀತಿಸುತ್ತಿದ್ದ. ನಿರ್ಮಲಾ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ನಿರ್ಮಲಾಳನ್ನು ಮದುವೆ ಮಾಡಿಕೊಡುವಂತೆ ಈ ಮೊದಲು ಆಕೆಯ ಪಾಲಕರಲ್ಲಿ ಈತ ಕೇಳಿದ್ದ. ಆದರೆ ಆಕೆಯ ಮನೆಯವರು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ ಬೇರೊಬ್ಬ ಹುಡುಗಿಯನ್ನು 2 ತಿಂಗಳ ಹಿಂದೆ ವಿವಾಹವಾಗಿದ್ದ. ಆದರೆ ಭೋಜರಾಜ ನಿರ್ಮಲಾ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ. ಆಕೆ ಬೇರೊಂದು ಊರಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಆದರೆ ಪರೀಕ್ಷೆ ಹಿನ್ನೆಲೆಯಲ್ಲಿ ಓದಲೆಂದು ಮನೆಗೆ ಬಂದಿದ್ದಳು. ಇದೇ ಸಮಯಕ್ಕೆ ಕಾಯುತ್ತಿದ್ದ ಈ ಪಾಗಲ್ ಪ್ರೇಮಿ ಭೋಜರಾಜ ಮಚ್ಚಿನಿಂದ ಆಕೆಯ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾಗಿದ್ದನು.

Ads on article

Advertise in articles 1

advertising articles 2

Advertise under the article