-->
ಬೆಂಗಳೂರು: ಭಾರೀ ಜನಾಕ್ರೋಶಕ್ಕೆ ಮಣಿದ ರಾಜ್ಯ ಸರಕಾರ ಸರಕಾರಿ ಕಚೇರಿ ಫೋಟೋ, ವೀಡಿಯೋ ಶೂಟಿಂಗ್ ಆದೇಶ ವಾಪಸ್!

ಬೆಂಗಳೂರು: ಭಾರೀ ಜನಾಕ್ರೋಶಕ್ಕೆ ಮಣಿದ ರಾಜ್ಯ ಸರಕಾರ ಸರಕಾರಿ ಕಚೇರಿ ಫೋಟೋ, ವೀಡಿಯೋ ಶೂಟಿಂಗ್ ಆದೇಶ ವಾಪಸ್!

ಬೆಂಗಳೂರು : ಭಾರೀ ಜನಾಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಕೆಲಸದ ವೇಳೆ ಖಾಸಗಿ ವ್ಯಕ್ತಿಗಳು ಫೋಟೋ ವೀಡಿಯೋ ತೆಗೆಯಬಾರದೆಂಬ ಆದೇಶವನ್ನು ತಡರಾತ್ರಿಯಿಂದಲೇ ವಾಪಸ್ ಪಡೆದುಕೊಂಡಿದೆ.


ಜುಲೈ 15ರಂದು ರಾಜ್ಯ ಸರ್ಕಾರದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯು ( ಡಿಪಿಎಆರ್ ) ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಕೆಲಸದ ವೇಳೆ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯುವುದನ್ನು ಮತ್ತು ವೀಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಉಲ್ಲೇಖಿಸಿತ್ತು. ಸರ್ಕಾರದ ಈ ಆದೇಶ ಪ್ರತಿಯು ಎಲ್ಲಾ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅಲ್ಲದೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತ್ತು. ಜೊತೆಗೆ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

ಇದೀಗ ಜನಾಕ್ರೋಶವನ್ನು ಗಮನಿಸಿರುವ ಸರ್ಕಾರ ತಡರಾತ್ರಿಯೇ ಆದೇಶವನ್ನು ವಾಪಸ್ ಪಡೆದುಕೊಂಡಿದ್ದು , ಈ ಸಂಬಂಧ ಹೊಸ ಆದೇಶವನ್ನು ಹೊರಡಿಸಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article