-->
ತನ್ನನ್ನು ವಿವಾಹವಾಗದ ಸೇಡು: ಯುವತಿಯ ರುಂಡವನ್ನೇ ಕಡಿದ ಪಾಗಲ್ ಪ್ರೇಮಿ!

ತನ್ನನ್ನು ವಿವಾಹವಾಗದ ಸೇಡು: ಯುವತಿಯ ರುಂಡವನ್ನೇ ಕಡಿದ ಪಾಗಲ್ ಪ್ರೇಮಿ!

ವಿಜಯನಗರ: ತಾನು ಪ್ರೀತಿಸಿರುವ ಯುವತಿ ತನ್ನನ್ನು ವಿವಾಹಗಲಿಲ್ಲವೆಂದು ಪಾಗಲ್ ಪ್ರೇಮಿಯೋರ್ವನು ಕೋಪದಿಂದ ಆಕೆಯ ರುಂಡವನ್ನು ಕಡಿದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಭಯಾನಕ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ನಡೆದಿದೆ.

ನಿರ್ಮಲಾ( 23 ) ಭೀಕರವಾಗಿ ಹತ್ಯೆಯಾದ ಯುವತಿ.‌ ಭೋಜರಾಜ ಎಂಬ ಪಾಗಲ್ ಪ್ರೇಮಿ ಈ ಭಯಾನಕ ಕೃತ್ಯ ಎಸಗಿದ್ದಾನೆ . 

ಆರೋಪಿ ಭೋಜರಾಜ ಎಂಬಾತ ನಿರ್ಮಲಾ ಎಂಬ ಈ ಯುವತಿಯನ್ನು ಪ್ರೀತಿಸುತ್ತಿದ್ದ. ನಿರ್ಮಲಾ ಗ್ರೂಪ್ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು. ನಿರ್ಮಲಾಳನ್ನು ತನಗೆ ವಿವಾಹ ಮಾಡಿಕೊಂಡುವಂತೆ ಈ ಮೊದಲು ಆಕೆಯ ಪಾಲಕರಲ್ಲಿ ಈತ ಕೇಳಿದ್ದ. ಆದರೆ ಆಕೆಯ ಮನೆಯವರು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತ ಬೇರೊಬ್ಬಳನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದ.

ಆದರೆ ಭೋಜರಾಜ, ನಿರ್ಮಲಾ ತನ್ನನ್ನು ವಿವಾಹವಾಗಿಲ್ಲವೆಂದು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.  ಬೇರೊಂದು ನಗರದಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು. ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಈ ಪಾಗಲ್ ಪ್ರೇಮಿ ಭೂಜರಾಜ ಆಕೆಯ ರುಂಡವನ್ನು ಮಚ್ಚಿನಿಂದ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾಗಿದ್ದಾನೆ.

ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ಯುವತಿಯ ರುಂಡದೊಂದಿಗೆ ಬಂದಿದ್ದಾನೆ. ಸ್ಥಳಕ್ಕೆ ಹಿರಿಯ ಪೊಲೀಸ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article