
ಪುತ್ತೂರು: ಸಂಚರಿಸುತ್ತಿದ್ದ ಬಸ್ ನಲ್ಲಿ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಗಂಡಾಂತರ
7/06/2022 05:26:00 AM
ಪುತ್ತೂರು: ಸಂಚಾರದಲ್ಲಿದ್ದ ಕೆಎಸ್ಆರ್ ಟಿಸಿ ಬಸ್ ನ ಇಂಜಿನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಪುತ್ತೂರಿನ ಬೊಳುವಾರು ಸಮೀಪ ನಡೆದಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಕೊಡಗಿನ ಸೋಮವಾರ ಪೇಟೆಯಿಂದ ಪುತ್ತೂರಿಗೆ ಆಗಮಿಸಿರುವ ಈ ಕೆಎಸ್ಆರ್ ಟಿಸಿ ಬಸ್ ಧರ್ಮಸ್ಥಳದ ಕಡೆಗೆ ಸಂಚರಿಸುತ್ತಿತ್ತು. ಆದರೆ ಬಸ್ ಬೊಳುವಾರುವಿನ ಇನ್ ಲ್ಯಾಂಡ್ ಮಯೂರ ತಲುಪುತ್ತಿದ್ದಂತೆ ಇಂಜಿನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿದೆ.
ತಕ್ಷಣ ಚಾಲಕ ಬಸ್ ಅನ್ನು ಬದಿಗೆ ನಿಲ್ಲಿಸಿದ್ದಾನೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ದೌಢಾಯಿಸಿರುವ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.