-->
ಮಂಗಳೂರಿನಲ್ಲಿ ಈಶ್ ಮೋಟಾರ್ಸ್ ಸಂಸ್ಥೆಯ ಉದ್ಘಾಟನಾ ಸಮಾರಂಭ

ಮಂಗಳೂರಿನಲ್ಲಿ ಈಶ್ ಮೋಟಾರ್ಸ್ ಸಂಸ್ಥೆಯ ಉದ್ಘಾಟನಾ ಸಮಾರಂಭ

ಮಂಗಳೂರಿನಲ್ಲಿ ಈಶ್ ಮೋಟಾರ್ಸ್ ಸಂಸ್ಥೆಯ ಉದ್ಘಾಟನಾ ಸಮಾರಂಭ

ಮಂಗಳೂರು: ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್‍ನ ಅಧಿಕೃತ ಡೀಲರ್ ಆಗಿರುವ ಈಶ್ ಮೋಟಾರ್ಸ್ ವೆಸ್ಪಾ ಮತ್ತು ಏಪ್ರಿಲಿಯಾ ಸ್ಕೂಟರ್‍ಗಳ ಅಧಿಕೃತ ಮಾರಾಟ ಸಂಸ್ಥೆಯಾಗಿದ್ದು ಇದರ ನೂತನ ಶೋರೂಂ ಕೊಟ್ಟಾರ ಜಿಂಜರ್ ಹೋಟೆಲ್ ಬಳಿ ಸೋಮವಾರ, ಜುಲೈ 04, 2022ರಂದು ಸಂಜೆ 5:30 ಉದ್ಘಾಟನೆಗೊಳ್ಳಲಿದೆ.ಸ್ಕೂಟರ್ ಮಾರಾಟದಲ್ಲಿ ಅಪಾರ ಮೆಚ್ಚುಗೆ ಗಳಿಸಿ ಉತ್ತಮ ಬೆಳವಣಿಗೆ ಸಾಧಿಸುತ್ತಿರುವ ವೆಸ್ಪಾ ಮತ್ತು ಏಪ್ರಿಲಿಯಾ ಕಂಪನಿಯು ಗ್ರಾಹಕರಿಂದ ಭರ್ಜರಿ ಬೇಡಿಕೆ ಪಡೆದುಕೊಂಡಿದೆ. ಗ್ರಾಹಕರ ಬೇಡಿಕೆಯೆಂತೆ ಮಂಗಳೂರಿನಲ್ಲಿ ಈಶ್ ಮೋಟಾರ್ಸ್ ಹೊಸ ಶೋರೂಂ ಆರಂಭಿಸಲಿದೆ.ಈಶ್ ಮೋಟಾರ್ಸ್‍ನ ನೂತನ ಶೋರೂನ್ನು ಕಂಪನಿಯ ಅಧಿಕಾರಿಗಳಾದ ಶ್ರೀ ವಿಜಯ್ ಭಟ್, ಹೆಡ್-2 W ಡೊಮೆಸ್ಟಿಕ್ ಬಿಸಿನೆಸ್ (ICE)-ಮಾರಾಟ ಮತ್ತು ಸೇವೆ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಬಿಜು ಸುಕುಮಾರನ್, ವಲಯ ಮ್ಯಾನೇಜರ್ ಸೇಲ್ಸ್ & ನೆಟ್‍ವರ್ಕ್ ವಿಸ್ತರಣೆ (ICE)-ದಕ್ಷಿಣ, ಶ್ರೀ ಶಂಕರ್ ರಾಮನ್, ವಲಯ ವ್ಯವಸ್ಥಾಪಕ ಸೇವೆ-ದಕ್ಷಿಣ, 2W S&M ಮೊದಲಾದವರು ಭಾಗವಹಿಸಲಿದ್ದಾರೆ.'ಏಪ್ರಿಲಿಯಾ' ಮತ್ತು 'ವೆಸ್ಪಾ' ವಿನೂತನ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಸೇಲ್ಸ್‌ನಲ್ಲಿ ಭಾರಿ ಬೇಡಿಕೆ ಮತ್ತು ಉತ್ತಮ ಸ್ಪಂದನೆ ಪಡೆಯುತ್ತಿರುವ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ."ರೈಡಿಂಗ್ ಮೇಡ್ ಫನ್ ವಿದ್ ಸ್ಪೋರ್ಟಿ ಜೇನೆಸ್" ಎಂಬ ಧ್ಯೇಯ ವಾಕ್ಯದೊಂದಿಗೆ Aprilia scooter SXR 160 ಮತ್ತು SR 160 model ಲಭ್ಯವಾಗಲಿದೆ. 160.03 ಸಿಸಿ ಸಾಮರ್ಥ್ಯ ಹಾಗೂ 35 ಕಿ.ಮೀ. ಮೈಲೇಜ್ ನೀಡುತ್ತದೆ.ಈ ದ್ವಿಚಕ್ರ ವಾಹನಗಳು ಕ್ರಮವಾಗಿ ಏಳು ಮತ್ತು ಆರು ಲೀಟರ್ ಪೆಟ್ರೋಲ್ ತುಂಬುವ ಟ್ಯಾಂಕ್‍ ಹೊಂದಿವೆ. ಸ್ಕೂಟರ್‍ನ ಒಟ್ಟು ಭಾರ ಕ್ರಮವಾಗಿ 129 ಕೆ. ಜಿ ಮತ್ತು 122 ಕೆಜಿಯಾಗಿದೆ. ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್, ದೊಡ್ಡಗಾತ್ರದ ಚಕ್ರಗಳನ್ನು ಹೊಂದಿದ್ದು, ಕೊಕ್ಕಿನ ರೀತಿಯ ವಿನ್ಯಾಸ ಹೊಂದಿದ್ದು, ಸ್ಪೂರ್ತಿದಾಯಕ ಮಾಹಿತಿ ಜೊತೆಗೆ ಡಿಸ್‌ಪ್ಲೇ ಹೊಂದಿದೆ.


ವೆಸ್ಪ ಸ್ಕೂಟರ್

125 ಸಿಸಿ ಮತ್ತು 150 ಸಿಸಿ ಯ ಇಂಜಿನ್ ಹೊಂದಿರುವ 2 ರೀತಿಯ ಸ್ಕೂಟರ್‍ಗಳು ಲಭ್ಯವಿದ್ದು, BS 6 ಟೆಕ್ನಾಲಜಿ ಹೊಂದಿದ್ದು, ಇಕೊನಿಕ್ ಮೋನೋಕೊಕ್ವೆ ಡಿಸೈನ್ ಮಾದರಿಯಲ್ಲಿ ಇರಲಿದ್ದು LED HEADLIGHTSಗಳನ್ನುಅಳವಡಿಸಲಾಗಿದೆ. ಮುಂದಿನ ಚಕ್ರಗಳಿಗೆ, 150ಸಿಸಿಗೆ ABS ಆಧಾರಿತ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, 125ಸಿಸಿಗೆ CBS ಮಾದರಿ ಬ್ರೇಕ್ ಅಳವಡಿಸಲಾಗಿದೆ.

Ads on article

Advertise in articles 1

advertising articles 2

Advertise under the article