ಉಲಾಯಿಬೆಟ್ಟು: ಈಜಲು ಕಲ್ಲು ಕೋರೆಗಿಳಿದ ಯುವಕ ಮೃತ್ಯು!
Sunday, July 24, 2022
ಮಂಗಳೂರು: ಈಜಲು ತೆರಳಿರುವ ಯುವಕನೋರ್ವನು ಕಲ್ಲುಕೋರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಮಲ್ಲೂರು ಸಮೀಪದ ಉಳಾಯಿಬೆಟ್ಟು ಬದ್ರಿಯ ನಗರದಲ್ಲಿ ನಡೆದಿದೆ.
ಜೋಕಟ್ಟೆ ನಿವಾಸಿ ಮುಹಮ್ಮದ್ ಶಿಯಾಝ್ (21) ಮೃತಪಟ್ಟ ದುರ್ದೈವಿ ಯುವಕ.
ರವಿವಾರ ಬೆಳಗ್ಗೆ ಶಿಯಾಝ್ ಉಳಾಯಿಬೆಟ್ಟುವಿನ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆ 5:30ಕ್ಕೆ ಉಲಾಯಿಬೆಟ್ಟು ಕಾಯರಪದವು ಎಂಬಲ್ಲಿ ಶಿಯಾಬ್ ತಮ್ಮ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡಿದ್ದರು. ಬಳಿಕ ಆಟದ ಮೈದಾನದ ಬಳಿಯೇ ಇದ್ದ ಕೆಂಪು ಕಲ್ಲಿನ ಕ್ವಾರೆಗೆ ಈಜಲು ಹೋಗಿದ್ದರು.
ಆದರೆ ಕೋರೆಯ ಆಳ ತಿಳಿಯದೆ ಈಜಲು ಇಳಿದ ಅವರು ಕೋರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.