ಬಾಲಿವುಡ್ ನಟಿ ಸುಶ್ಮಿತಾ ಸೇನ್- ಲಲಿತ್ ಮೋದಿ ನಡುವೆ ಡೇಟಿಂಗ್: ಮದುವೆ ಬಗ್ಗೆ ಸ್ಪಷ್ಟನೆ ಏನು?

ಮುಂಬೈ: ಬಾಲಿವುಡ್​ ನಟಿ ಸುಶ್ಮಿತಾ ಸೇನ್​​​ ಹಾಗೂ ಐಪಿಎಲ್​​ ಸ್ಥಾಪಕ ಲಲಿತ್​ ಮೋದಿ ಜೊತೆಗಿರುವ ಫೋಟೋ ಹಾಗೂ ಅವರಿಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಟ್ವಿಟರ್​ನಲ್ಲಿ ಸ್ವತಃ ಲಲಿತ್ ಮೋದಿಯೇ ಶೇರ್​ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ್ದಾರೆ. 

ಲಲಿತ್​ ಮೋದಿ, ಟ್ವಿಟರ್​, ಇನ್​ಸ್ಟಾಗ್ರಾಂಗಳಲ್ಲಿ ಸುಶ್ಮಿತಾ ಸೇನ್​ರೊಂದೊಗಿನ ಸಂಬಂಧವನ್ನು ಬಹಿರಂಗ ಮಾಡುವ ಮೂಲಕ ತಾವು ಶೀಘ್ರದಲ್ಲಿಯೇ ಮದುವೆಯಾಗುತ್ತಿದ್ದೇವೆ ಎಂಬ ವಿಚಾರವನ್ನು ಬಯಲು ಮಾಡಿದ್ದಾರೆ. ಈ ವಿಚಾರದಲ್ಲಿ ಮೌನವಾಗಿದ್ದ ನಟಿ ಸುಶ್ಮಿತಾ ಸೇನ್​ ಇದೀಗ ತನ್ನ ಹಾಗೂ ಲಲಿತ್​​ ಮೋದಿ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.


ತನ್ನ ಹೆಣ್ಣು ಮಕ್ಕಳೊಂದಿಗಿನ ಫೋಟೋವನ್ನು ಇನ್ಸ್ಟ್ರಾಗ್ರಾಂನಲ್ಲಿ ಪೋಸ್ಟ್​ ಮಾಡುವ ಮೂಲಕ ನಟಿ ಸುಶ್ಮಿತಾ ಸೇನ್​ ತಮ್ಮ ಕಡೆಯಿಂದ ಈ ಸಂಬಂಧದ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ. ನಾನು ಸಂತೋಷದ ಸ್ಥಳದಲ್ಲಿದ್ದೇನೆ‌. ನಾನು ಯಾವುದೇ ಮದುವೆಯಾಗಿಲ್ಲ, ಉಂಗುರ ಬದಲಾಯಿಸಿಲ್ಲ, ನಾನು ಪ್ರೀತಿಯಿಂದ ಸುತ್ತುವರಿದಿದ್ದೇನೆ. ನನ್ನ ಜೀವನ ಹಾಗೂ ಕೆಲಸಕ್ಕೆ ಈಗಾಗಲೇ ಸಾಕಷ್ಟು ಸ್ಪಷ್ಟೀಕರಣವನ್ನು ನೀಡಿದ್ದೇನೆ. ನನ್ನ ಸಂತೋಷವನ್ನು ಹಂಚಿಕೊಂಡಿದವರಿಗೆ ಧನ್ಯವಾದಗಳು. ಹಾಗೂ ಹಂಚಿಕೊಳ್ಳದೇ ಇರುವವರಿಗೂ ಧನ್ಯವಾದಗಳು. ಸ್ನೇಹಿತರೇ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಲಲಿತ್​ ಮೋದಿ ತಾವಿಬ್ಬರೂ ಮಾಲ್ಡೀವ್ಸ್​, ಸಾರ್ಡಿನಿಯಾ ಪ್ರವಾಸಗಳ ಬಳಿಕ ಲಂಡನ್​ಗೆ ಹಿಂತಿರುಗಿದ್ದೇವೆ. ನನ್ನ ಬೆಟರ್​ ಹಾಫ್​ ಸುಶ್ಮಿತಾ ಸೇನ್​ ಬಗ್ಗೆ ಇಲ್ಲಿ ಉಲ್ಲೇಖಿಸಬಾರದು. ನನ್ನ ಜೀವನದ ಹೊಸ ಆರಂಭ ಎಂದು ಬರೆದುಕೊಂಡಿದ್ದರು.

ಇದಾದ ಬಳಿಕ ಲಲಿತ್​ ಮೋದಿ ಹಾಗೂ ಸುಶ್ಮಿತಾ ಸೇನ್​ ಮದುವೆಯಾಗಿದ್ದಾರೆ ಎಂಬ ವಿಚಾರ ಎಲ್ಲೆಡೆ ವೈರಲ್​ ಆಗಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿ ಮತ್ತೊಂದು ಟ್ವೀಟ್​ ಮಾಡಿದ ಲಲಿತ್​ ಮೋದಿ ನಾವು ಡೇಟಿಂಗ್​​ನಲ್ಲಿದ್ದೇವೆ. ಮದುವೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೇ ಶೀಘ್ರದಲ್ಲಿಯೇ ಮದುವೆಯಾಗುವ ಸೂಚನೆಯನ್ನೂ ನೀಡಿದ್ದರು.

ತನಗಿಂತ ಕಿರಿಯ ರೊಹಮನ್ ಶಾಲ್ ನೊಂದಿಗೆ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಸುಶ್ಮಿತಾ ಸೇನ್ ಇತ್ತೀಚೆಗೆ ನಾವು ಬ್ರೇಕ್ ಅಪ್ ಮಾಡಿಕೊಂಡಿದ್ದೇವೆ. ಸಂಬಂಧ ಮುರಿದುಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಲಲಿತ್ ಮೋದಿಯೊಂದಿಗಿನ ಆಕೆಯ ಹೊಸ ಸಂಬಂಧ ಬಯಲಾಗಿದೆ. ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ 2010ರಲ್ಲಿ ಲಲಿತ್ ಮೋದಿ ಭಾರತವನ್ನು ತೊರೆದಿದ್ದಾರೆ.