BSNLನಿಂದ ಹೊಸ ಎರಡು ಪ್ರೀಪೇಯ್ಡ್ ಯೋಜನೆ ಆರಂಭ

BSNLನಿಂದ ಹೊಸ ಎರಡು ಪ್ರೀಪೇಯ್ಡ್ ಯೋಜನೆ ಆರಂಭ





ದೇಶದ ಮುಂಚೂಣಿ ದೂರಸಂಪರ್ಕ ಸಂಸ್ಥೆ ಭಾರತ ಸಂಚಾರ್ ನಿಗಮ್ ನಿ. (ಬಿಎಸ್‌ಎನ್‌ಎಲ್‌) ಎರಡು ಹೊಸ ಯೋಜನೆಗಳನ್ನು ಜಾರಿಗೊಳಿಸಿದೆ.



ಪ್ಲ್ಯಾನ್ 228 ಹಾಗೂ ಪ್ಲ್ಯಾನ್ 239ನ್ನು ಜುಲೈ ತಿಂಗಳಿನಲ್ಲಿ ಪರಿಚಯಿಸಲಾಗಿದೆ. ಈ ಎರಡು ಹೊಸ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ.



ಪ್ಲ್ಯಾನ್ 228 ಯೋಜನೆಯಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್‌ ಹಾಗೂ ಪ್ರತಿದಿನ 2 GB ಡೇಟಾ ಹಾಗೂ 100 SMS ಸಹಿತ ಉಳಿದ ಸೌಲಭ್ಯ ಸಿಗಲಿದೆ.



ಪ್ಲ್ಯಾನ್ 239 ಯೋಜನೆಯಲ್ಲಿ 10 ರೂ. ಹೆಚ್ಚುವರಿ ಟಾಕ್‌ ಟೈಮ್, ಅನ್‌ಲಿಮಿಟೆಡ್ ವಾಯ್ಸ್ ಕಾಲ್‌ ಹಾಗೂ ಪ್ರತಿದಿನ 2 GB ಡೇಟಾ ಹಾಗೂ 100 SMS ಸಹಿತ ಉಳಿದ ಸೌಲಭ್ಯ ಸಿಗಲಿದೆ.

ಹೊಸ ದರಗಳು ಜುಲೈ 1ರಿಂದ ಗ್ರಾಹಕರಿಗೆ ಲಭ್ಯವಿದೆ. ಇತರ ಕಂಪೆನಿಗಳಾದ ಜಿಯೋ, ವಿ ಹಾಗೂ ಏರ್ ಟೆಲ್ ದರ ಸಮರ ನಡೆಸಿದ್ದು, ಹೊಸ ರಿವೈಸ್ಡ್‌ ದರಗಳನ್ನು ಪ್ರಕಟಿಸಿವೆ.



ಪ್ಲ್ಯಾನ್ 228 ಹಾಗೂ ಪ್ಲ್ಯಾನ್ 239 ರು ತಿಂಗಳ ಪ್ರೀಪೇಯ್ಡ್ ಯೋಜನೆಯಲ್ಲಿ ವಾಯ್ಸ್ ಕಾಲಿಂಗ್, 2 GB ಪ್ರತಿ ದಿನದ ಡೇಟಾ ಸಿಗಲಿದೆ. 2 GB ಡೇಟಾ ಮುಗಿದ ಬಳಿಕ 80 KBPS ವೇಗದಲ್ಲಿ ಇಂಟರ್ನೆಟ್ ದೊರೆಯಲಿದೆ. ಇದರ ಜೊತೆಗೆ ಪ್ರತಿದಿನ 100 SMS ಪ್ರತಿದಿನ ಸಿಗಲಿದೆ.



ಪ್ಲ್ಯಾನ್ 228 ಯೋಜನೆಯಲ್ಲಿ ಪ್ರೊಗೆಸಿವ್ ವೆಬ್ ಆಪ್ ಬಳಸುವ BSNL ಗ್ರಾಹಕರಿಗೆ ಅರೆನಾ ಮೊಬೈಲ್ ಗೇಮಿಂಗ್ ಸರ್ವಿಸ್ ಕೂಡಾ ದೊರೆಯಲಿದೆ. ಪ್ಲ್ಯಾನ್ 239 ಯೋಜನೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿ 10 ರೂ.ಗಳ ಟಾಕ್ ಟೈಮ್ ಸಿಗಲಿದೆ. ಪ್ಲ್ಯಾನ್ 229 ರು ಯೋಜನೆಯಲ್ಲಿ ಪ್ಲ್ಯಾನ್ 228 ಯೋಜನೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳೂ ಲಭ್ಯವಾಗಲಿದೆ.



ಇತರ ಕಂಪೆನಿಗಳಿಗೆ ಹೋಲಿಕೆ

ವಡಫೋನ್ ಐಡಿಯಾ ದರಗಳನ್ನು ಪರಿಶೀಲಿಸಿದರೆ, ಪ್ಲ್ಯಾನ್ 239 ಮತ್ತು ಪ್ಲ್ಯಾನ್ 249 ಯೋಜನೆಗಳಲ್ಲಿ ಅನಿಯಮಿತ ಟಾಕ್‌ಟೈಮ್ ಜೊತೆಗೆ ದಿನಕ್ಕೆ 1GB ಮತ್ತು 1.5GB ಡೇಟಾ ಸಿಗಲಿದೆ. ಪ್ಲ್ಯಾನ್ 239 ರು ಯೋಜನೆಯ ವ್ಯಾಲಿಡಿಟಿ 24 ದಿನ ಹಾಗೂ ಪ್ಲ್ಯಾನ್ 249 ರು ಯೋಜನೆಯ ವ್ಯಾಲಿಡಿಟಿ 21 ದಿನಗಳ ತನಕ ಇರಲಿದೆ.



ಏರ್‌ಟೆಲ್ ಪ್ಲ್ಯಾನ್ 239 ಪ್ರಿಪೇಯ್ಡ್ ಯೋಜನೆಯು ಅನ್‌ಲಿಮಿಟೆಡ್ ಟಾಕ್‌ಟೈಮ್, 24 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಪ್ರತಿದಿನ 1 GB ಡೇಟ ಸಿಗುತ್ತದೆ.



ಇನ್ನು, ಜಿಯೋ ಈ ಬೆಲೆ ಶ್ರೇಣಿಯಲ್ಲಿ ಹೆಚ್ಚಿನ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. ಪ್ಲ್ಯಾನ್ 222ನಲ್ಲಿ ಪ್ರತಿದಿನಕ್ಕೆ 2GB ಡೇಟಾ ಮತ್ತು 28 ದಿನಗಳವರೆಗೆ ಅನಿಯಮಿತ ಕರೆ, ಪ್ಲ್ಯಾನ್ 239 ಯೋಜನೆಯು ಪ್ರತಿದಿನಕ್ಕೆ 1.5GB ಡೇಟಾವನ್ನು 28 ದಿನಗಳವರೆಗೆ ನೀಡುತ್ತದೆ ಮತ್ತು ಪ್ಲ್ಯಾನ್ 249 ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2GB ಡೇಟ 23 ದಿನಗಳವರೆಗೆ ನೀಡುತ್ತದೆ.