ಬೆಂಗಳೂರು: ಕುಖ್ಯಾತ ಅಂತಾರಾಜ್ಯ ಬೈಕ್ ಕಳವು ಖದೀಮರು ಅರೆಸ್ಟ್
Friday, July 22, 2022
ಬೆಂಗಳೂರು: ಬೈಕ್ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ಬೊಮ್ಮನಹಳ್ಳಿ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ. ಇವರಿಂದ ಬರೋಬ್ಬರಿ 26 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಮಿಳುನಾಡು ಮೂಲದ ನೆಡುಚೆಲಿಯನ್, ತಿರುಪತಿ ಹಾಗೂ ವಲ್ಲರಸು ಬಂಧಿತ ಖದೀಮರು. ಈ ಖದೀಮರು ಡಿಯೋ ಬೈಕ್‌ಗಳನ್ನೆ ಟಾರ್ಗೆಟ್ ಮಾಡಿ ಕಳವು ಮಾಡುತ್ತಿದ್ದರು.
ತಮಿಳುನಾಡಿನಿಂದ ಬಸ್‌ನಲ್ಲಿ ಬರುತ್ತಿದ್ದ ಆರೋಪಿಗಳು, ರಾತ್ರಿ ಹೊತ್ತು ರಸ್ತೆಗಳಲ್ಲಿ ಒಂಟಿಯಾಗಿ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಟಾರ್ಗೆಟ್ ಮಾಡಿ ಕಳುವುಗೈಯುತ್ತಿದ್ದರು. ಓರ್ವ ಬೈಕ್ ಹತ್ತಿರ ಬಂದು ಲಾಕ್ ಮುರಿದು ಇನ್ನೊಬ್ಬನಿಗೆ ನಿರ್ದೇಶನ ನೀಡುತ್ತಿದ್ದ. ಮತ್ತೊಬ್ಬ ಸ್ವಲ್ಪ ದೂರದಲ್ಲಿ ನಿಂತು ಸನ್ನೆ ಮಾಅಡುತ್ತಿದ್ದ. ಇನ್ನೊಬ್ಬ ಇನ್ನೂ ಸ್ವಲ್ಪ ದೂರದಲ್ಲಿ ನಿಂತು ಯಾರಾದರೂ ಬರ್ತಿದ್ದಾರೆಯೇ ಎಂದು ನೋಡುತ್ತಿದ್ದ. ಬಳಿಕ ಬೈಕ್ ಕದ್ದು, ಅದೇ ಬೈಕ್‌ನಲ್ಲಿ ರಾತ್ರೋರಾತ್ರಿ ತಮಿಳುನಾಡಿಗೆ ಪರಾರಿಯಾಗುತ್ತಿದ್ದರು.
ಕದ್ದ ಬೈಕ್ ಗಳನ್ನು ತಮಿಳುನಾಡಿನಲ್ಲಿ 10 ರಿಂದ 15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇದೇ ರೀತಿ ಬೈಕ್ ಕದ್ದು ತಮಿಳುನಾಡಿತ್ತ ಆರೋಪಿಗಳು ತೆರಳುತ್ತಿದ್ದಾಗ, ಬೀಟ್ ಪೊಲೀಸರನ್ನು ನೋಡಿ ಬೈಕ್ ಯೂಟರ್ನ್ ತೆಗೆದುಕೊಳ್ಳುತ್ತಿದ್ದರು. ಇದರಿಂದ ಅನುಮಾಗೊಂಡು ಅವರನ್ನು ಹಿಂಬಾಲಿಸಿ ಹಿಡಿದು ವಿಚಾರಣೆ ಮಾಡಿದಾಗ ಖದೀಮರ ಕೈಚಳಕ ಬಯಲಾಗಿದೆ.