-->

4 ವರ್ಷ ಲೈಂಗಿಕ ಸಂಪರ್ಕ ಮಾಡಿ  ಬೇರೆಯವಳೊಂದಿಗೆ ವಿವಾಹವಾಗ್ತಿರೋ ವಕೀಲನಿಗೆ ಸಿಕ್ಕಿತು ಜಾಮೀನು: ಅತ್ಯಾಚಾರದ ಹೈಕೋರ್ಟ್​ ಹೇಳಿದ್ದೇನು ಗೊತ್ತೇ?

4 ವರ್ಷ ಲೈಂಗಿಕ ಸಂಪರ್ಕ ಮಾಡಿ ಬೇರೆಯವಳೊಂದಿಗೆ ವಿವಾಹವಾಗ್ತಿರೋ ವಕೀಲನಿಗೆ ಸಿಕ್ಕಿತು ಜಾಮೀನು: ಅತ್ಯಾಚಾರದ ಹೈಕೋರ್ಟ್​ ಹೇಳಿದ್ದೇನು ಗೊತ್ತೇ?

ಕೊಚ್ಚಿ (ಕೇರಳ): ವಯಸ್ಕರಿಬ್ಬರೂ ಸಮ್ಮತದಿಂದ ಪರಸ್ಪರ ಒಪ್ಪಿ ಲೈಂಗಿಕ ಸಂಪರ್ಕ ಬೆಳೆಸಿ ಬಳಿಕ ವಿವಾಹವಾಗಲು ನಿರಾಕರಿಸಿದರೆನ್ನುವ ಕಾರಣಕ್ಕೆ ಅದು ಅತ್ಯಾಚಾರ ಎಣಿಸುವುದಿಲ್ಲ ಎಂದು ಕೇರಳ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಅಲ್ಲದೆ ವಿವಾಹ ಪೂರ್ವ ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ನೀಡುವ ಪೂರ್ವದಲ್ಲಿ ಹತ್ತಾರು ಬಾರಿ ಯೋಚಿಸುವ ಅಗತ್ಯತೆಯಿದೆ ಎಂದು ಕೋರ್ಟ್​ ಪರೋಕ್ಷವಾಗಿ ಬುದ್ಧಿ ಹೇಳಿದೆ. 

ಇಬ್ಬರು ಪ್ರಾಪ್ತ ವಯಸ್ಕರ ನಡುವಿನ ಲೈಂಗಿಕ ಸಂಬಂಧವನ್ನು ಸೆಕ್ಷನ್​​ 376ರಡಿ ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇತ್ತೀಚಿಗೆ ಜೋಡಿಗಳಲ್ಲಿ ಸಂಬಂಧ ಮುರಿದುಕೊಂಡ ಬಳಿಕ, ಅತ್ಯಾಚಾರದ ಕೇಸ್​ ದಾಖಲಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ವಿವಾಹವಾಗುವ ಭರವಸೆ ನೀಡಿ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಾಗುತ್ತದೆ, ಅದು ಅತ್ಯಾಚಾರ ಎಂದು ಎನಿಸಿಕೊಳ್ಳುತ್ತದೆ ಎಂದು ನ್ಯಾಯಮೂರ್ತಿ ಬೆಚ್ಚು ಕುರಿಯನ್​ ಥಾಮಸ್ ನೇತೃತ್ವದ ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ. 

ಅತ್ಯಾಚಾರದ ಆರೋಪದಲ್ಲಿ ಸಿಲುಕಿರುವ ಕೇಂದ್ರ ಸರ್ಕಾರಿ ವಕೀಲರೊಬ್ಬರಿಗೆ ಜಾಮೀನು ನೀಡಿರುವ ಕೋರ್ಟ್​ ಈ ಆದೇಶ ಹೊರಡಿಸಿದೆ. ಈ ವಕೀಲರು ತಮ್ಮ ಸಹದ್ಯೋಗಿಯೊಂದಿಗೆ ನಾಲ್ಕು ವರ್ಷ ಒಪ್ಪಿಗೆಯ ಮೇಲೆ ಲೈಂಗಿಕ ಸಂಬಂಧ ಹೊಂದಿದ್ದರು. ಬಳಿಕ ಆತ ಬೇರೊಬ್ಬನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದರು. ಈ ಬಗ್ಗೆ ಗೊತ್ತಾಗುತ್ತಿದ್ದಂತೆ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಈ ಹಿನ್ನೆಲೆಯಲ್ಲಿ ವಕೀಲರನ್ನು ಪೊಲೀಸರಿಗೆ ಬಂಧಿಸಿದ್ದರು. ಇವರ ವಿರುದ್ಧ ಅತ್ಯಾಚಾರದ ಕೇಸ್​ ದಾಖಲಾಗಿತ್ತು. 

ಜಾಮೀನು ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದರು. ಯುವತಿಯೊಂದಿಗೆ ನಡೆದ ಲೈಂಗಿಕ ಸಂಬಂಧ ಒಪ್ಪಿಗೆಯಿಂದ ಕೂಡಿತ್ತು. ಇದು ಸಂಪೂರ್ಣವಾಗಿ ಒಪ್ಪಿಗೆ ಮತ್ತು ಪ್ರೀತಿಯಿಂದ ನಡೆದಿದೆ ಎಂದು ವಕೀಲರು ವಾದಿಸಿದ್ದರು. ವಾದ – ಪ್ರತಿವಾದ ಆಲಿಸಿರುವ ಕೋರ್ಟ್​​ ಪ್ರಕರಣ ಗಂಭೀರ ಸ್ವರೂಪದಾಗಿದೆ. ಹೀಗಾಗಿ, ಆರೋಪಿ ಬೇರೆ ಕಡೆ ಪಲಾಯನ ಮಾಡುವಂತಿಲ್ಲ. ಆದರೆ, ಇದನ್ನು ಅತ್ಯಾಚಾರ ಎನ್ನಲಾಗದು ಎಂದಿದೆ.

Ads on article

Advertise in articles 1

advertising articles 2

Advertise under the article