ಬೆಂಗಳೂರು: ಪಿಎಸ್ಐ ನೇಮಕಾತಿ ಹಗರದಣಲ್ಲಿ ಅಭ್ಯರ್ಥಿಗಳಿಂದ 30 ಲಕ್ಷ ರೂ. ಲಂಚ ಪಡೆದ ಎಜಿಡಿಪಿ ಅರೆಸ್ಟ್ ಬೆನ್ನಲ್ಲೇ ಹಲವರ ಎದೆಯಲ್ಲಿ ಢವಢವ!
Tuesday, July 5, 2022
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣ ಆರೋಪದಲ್ಲಿ ನೇಮಕಾತಿ ವಿಭಾಗದ ಎಜಿಡಿಪಿ ಅಮೃತ್ ಪೌಲ್ ರನ್ನು ಸಿಐಡಿ ಅಧಿಕಾರಿಗಳು ಖೆಡ್ಡಾಕ್ಕೆ ಕಡೆವಿರುವ ಬೆನ್ನಲ್ಲೇ ಹಲವರ ಎದೆಯಲ್ಲಿ ಢವಢವ ಶುರುವಾಗಿದೆ.
ನೇಮಕಾತಿಯಲ್ಲಿ ನಡೆದ ಅಕ್ರಮದ ಹಿನ್ನೆಲೆಯಲ್ಲಿ ಅಮೃತ್ ಪೌಲ್ ರನ್ನು ಸಿಐಡಿ ಅಧಿಕಾರಿಗಳು ಮೂರ್ನಾಲ್ಕು ಬಾರಿ ವಿಚಾರಣೆ ನಡೆಸಿದ್ದರು. ಇದೀಗ ನಾಲ್ಕನೇ ಬಾರಿ ವಿಚಾರಣೆ ನಡೆಸಿದ ಬಳಿಕ ಎಜಿಡಿಪಿಯನ್ನೇ ಅರೆಸ್ಟ್ ಮಾಡಿದ್ದಾರೆ. ಪಿಎಸ್ಐ ಅಕ್ರಮ ನೇಮಕಾತಿ ಹಿನ್ನೆಲೆ ಮೇಲಿನ ಹಂತದ ಅಧಿಕಾರಿಗಳನ್ನು ವಿಚಾರಣೆ ನಡೆಸದ ಹಿನ್ನೆಲೆಯಲ್ಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಪಿಎಸ್ಐ ನೇಮಕಾತಿ ಎಜಿಡಿಪಿ ಅಮೃತ್ ಪೌಲ್ ಅರೆಸ್ಟ್ ಆಗಿದ್ದಾರೆ.
ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಜಿಡಿಪಿ ದರ್ಜೆಯ ಅಧಿಕಾಯೊಬ್ಬರು ಬಂಧನವಾಗಿದ್ದಾರೆ. ಒಬ್ಬೊಬ್ಬ ಪಿಎಸ್ಐ ಅಭ್ಯರ್ಥಿಯ ನೇಮಕಾತಿಗೆ 30 ಲಕ್ಷ ರೂ. ಲಂಚ ಪಡೆದ ಆರೋಪದಲ್ಲಿ ಅಮೃತ್ ಪೌಲ್ ಅರೆಸ್ಟ್ ಆಗಿದ್ದಾರೆ. ಇದೀಗ ಇವರ ಅರೆಸ್ಟ್ ಬೆನ್ನಲ್ಲೇ ಇತರ ಪ್ರಭಾವಿಗಳ ಎದೆಯಲ್ಲೂ ನಡುಕ ಆರಂಭವಾಗಿದೆ.