ಬೆಂಗಳೂರು: ಬಕ್ರೀದ್ ಹಬ್ಬಕ್ಕೆ ಮಾಂಸ ಮಾಡಲೆಂದು ಅಕ್ರಮ ಸಾಗಾಟದ 18 ಒಂಟೆಗಳ ರಕ್ಷಣೆ

ಬೆಂಗಳೂರು: ಬಕ್ರೀದ್ ಹಬ್ಬಕ್ಕೆ ಮಾಂಸ ಮಾಡಲೆಂದು ಅಕ್ರಮ ಸಾಗಾಟ ಮಾಡುತ್ತಿದ್ದ 18 ಒಂಟೆಗಳನ್ನು ಕರ್ನಾಟಕ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ರಕ್ಷಿಸಲಾಗಿದೆ.

ಬಕ್ರೀದ್ ಹಬ್ಬದ ದಿನಕ್ಕೆ ಈ ಒಂಟೆಗಳನ್ನು ಮಾಂಸ ಮಾಡಲೆಂದು ರಾಜಸ್ತಾನದಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊಸೂರು ನಗರಪಾಲಿಕೆ ಅಧಿಕಾರಿಗಳು ದಾಳಿ‌ನಡೆಸಿ ಒಂಟೆಗಳನ್ನು ರಕ್ಷಣೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಒಂಟೆಗಳ ಬಲಿ‌ನಿಷೇಧದ ಹಿನ್ನೆಲೆಯಲ್ಲಿ ಹೊಸೂರು ‌ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ದಾಳಿಯ ಸಂದರ್ಭ ಆರೋಪಿಗಳು ಒಂಟೆಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ 18 ಒಂಟೆಗಳನ್ನು ಕೋರಮಂಗಲದ ಗೋಶಾಲೆಗೆ ರವಾನಿಸಲಾಗಿದೆ.