ತೆಲಂಗಾಣ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ನನ್ನು ಅಮೇರಿಕಾದಲ್ಲಿ ಗುಂಡಿಕ್ಕಿ ಹತ್ಯೆ

ಹೈದರಾಬಾದ್: ತೆಲಂಗಾಣ ಮೂಲದ ಸಾಫ್ಟವೇರ್ ಇಂಜಿನಿಯರ್ ನನ್ನು ಅಮೆರಿಕಾದಲ್ಲಿ ಅಪರಿಚಿತನೋರ್ವನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬೆಳಗ್ಗಿನ ಜಾವ ಅವರನ್ನು ವಾಕಿಂಗ್ ಹೋದ ಸಂದರ್ಭ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ತೆಲಂಗಾಣ ರಾಜ್ಯದ ನಲ್ಗೊಂಡಾ ಜಿಲ್ಲೆಯ ಸಾಯಿ ಚರಣ್ (26) ಹತ್ಯೆಗೀಡಾದ ಸಾಫ್ಟ್‌ವೇರ್ ಇಂಜಿನಿಯರ್.

ಸಾಯಿಚರಣ್ ರವಿವಾರ ಬೆಳಗ್ಗಿನ ಜಾವ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭ ಅಪರಿಚಿತನೊಬ್ಬ  ಗುಂಡಿಕ್ಕಿ ಪರಾರಿಯಾಗಿದ್ದಾನೆ.‌ ಸಾಯಿ ಚರಣ್ ಉನ್ನತ ವಿದ್ಯಾಭ್ಯಾಸಕ್ಕಾಗಿ 2 ವರ್ಷಗಳ ಹಿಂದೆ ಅಮೆರಿಕಾಕ್ಕೆ ತೆರಳಿದ್ದರು. ಎಂಎಸ್​ ಪದವಿ ಶಿಕ್ಷಣ ಪೂರೈಸಿರುವ ಅವರು ಕಳೆದ ಆರು ತಿಂಗಳಿಂದ ಅವರು ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸಾಯಿ ಚರಣ್ ಕೆಲ ದಿನಗಳ ಹಿಂದೆಯಷ್ಟೇ ಹೊಸ ಕಾರೊಂದನ್ನು ಖರೀದಿಸಿದ್ದರು. 

ಸಾಯಿ ಚರಣ್ ಮೃತಪಟ್ಟಿರುವುದಾಗಿ ಸೋಮವಾರ ರಾತ್ರಿ ಆತನ ಗೆಳೆಯನೊಬ್ಬರು ನಮಗೆ ಕರೆ ಮಾಡಿ ತಿಳಿಸಿದ್ದಾರೆ. ಜೂ 17ರಂದು ನಾವು ಪುತ್ರನೊಂದಿಗೆ ಮಾತನಾಡಿದ್ದೆವು. ನವೆಂಬರ್​ನಲ್ಲಿ ಆತ ಭಾರತಕ್ಕೆ ಬರುವುದಾಗಿ ತಿಳಿಸಿದ್ದಾನೆ. ಸಾಯಿಚರಣ್ ಮೃತದೇಹವನ್ನು ಭಾರತಕ್ಕೆ ತರುವಂತೆ ಕೇಂದ್ರ ಸರ್ಕಾರಕ್ಕೆ ಎಂದು ಸಾಯಿಚರಣ್ ತಂದೆ ಮನವಿ ಮಾಡಿದ್ದಾರೆ.