-->
1000938341
ವಿವಾಹವಾಗಿ ಕೇವಲ ಒಂದು ತಿಂಗಳು ಆದರೆ ಪತ್ನಿ ನಾಲ್ಕು ತಿಂಗಳ ಗರ್ಭಿಣಿ: ಶಾಕ್ ಗೆ ಒಳಗಾದ ಪತಿ

ವಿವಾಹವಾಗಿ ಕೇವಲ ಒಂದು ತಿಂಗಳು ಆದರೆ ಪತ್ನಿ ನಾಲ್ಕು ತಿಂಗಳ ಗರ್ಭಿಣಿ: ಶಾಕ್ ಗೆ ಒಳಗಾದ ಪತಿ

ಮಹಾರಾಜಗಂಜ್ : ಮದುವೆಯಾದ ತಿಂಗಳೊಳಗೆ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಪರಿಣಾಮ ಪತಿ ಶಾಕ್ ಗೆ ಒಳಗಾಗಿರುವ ಘಟನೆ ಮಹಾರಾಜಗಂಜ್ ನ ಕೊಲ್ಹುಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತನಿಗೆ ಹಾಗೂ ಆಕೆಗೆ ವಿವಾಹವಾಗಿ ಕೇವಲ ಒಂದು ತಿಂಗಳೂ‌ ಆಗಿರಲಿಲ್ಲ. ಆದರೆ ಪತ್ನಿಯ ಆರೋಗ್ಯ ಹಠಾತ್ ಹದಗೆಟ್ಟಿದೆ. ತಕ್ಷಣ ಆಕೆಯನ್ನು ಚಿಕಿತ್ಸೆಗೊಳಪಡಿಸಿ ಅಲ್ಟ್ರಾಸೌಂಡ್ ಮಾಡಿಸಿದ್ದಾರೆ. ಆದರೆ ಅದರ ವರದಿ ನೋಡಿ ಪತಿ ಶಾಕ್ ಗೆ ಒಳಗಾಗಿದ್ದಾನೆ. ಈ ಬಗ್ಗೆ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಯುವತಿ ಹಾಗೂ ಆಕೆಯ ಪೋಷಕರು ತನಗೆ ವಂಚಿಸಿ ವಿವಾಹ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾನದ ಪತಿ. ತನ್ನ ಮದುವೆ ಆಗಿ ಕೇವಲ ಒಂದು ತಿಂಗಳಾಗಿದೆಯಷ್ಟೇ. ಆದರೆ ಅಷ್ಟರಲ್ಲಿ ಪತ್ನಿ ನಾಲ್ಕು ತಿಂಗಳ ಗರ್ಭಿಣಿ ಎಂದರೆ ಹೇಗೆ ಎಂದು ಯುವಕ ಪ್ರಶ್ನಿಸಿದ್ದಾನೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article