-->
ಆತನೊಂದಿಗೆ ಸಂಬಂಧ ಇಟ್ಟುಕೊಳ್ಳಬೇಡ ಎಂದರೂ ಕೇಳದ ಪುತ್ರಿ: ಪ್ರೀತಿಸಿದ ತಪ್ಪಿಗೆ ನಡೆಯಿತು ಅಪ್ರಾಪ್ತೆಯ ಮರ್ಯಾದಾ ಹತ್ಯೆ

ಆತನೊಂದಿಗೆ ಸಂಬಂಧ ಇಟ್ಟುಕೊಳ್ಳಬೇಡ ಎಂದರೂ ಕೇಳದ ಪುತ್ರಿ: ಪ್ರೀತಿಸಿದ ತಪ್ಪಿಗೆ ನಡೆಯಿತು ಅಪ್ರಾಪ್ತೆಯ ಮರ್ಯಾದಾ ಹತ್ಯೆ

ಪಿರಿಯಾಪಟ್ಟಣ: ಆತನೊಂದಿಗೆ ಸಂಬಂಧ ಇಟ್ಟುಕೊಳ್ಳಬೇಡವೆಂದರೂ ಕೇಳದ ಅಪ್ರಾಪ್ತ ಪುತ್ರಿಯನ್ನು ತಂದೆಯೇ ಕತ್ತು ಹಿಸುಕಿ ಕೊಲೆಗೈದ ಘಟನೆ ತಾಲ್ಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ.

ಕಗ್ಗುಂಡಿ ಗ್ರಾಮದ ಸುರೇಶ್  ಮತ್ತು ಬೇಬಿ ದಂಪತಿಯ ಪುತ್ರಿ ಶಾಲಿನಿ (17) ಹತ್ಯೆಯಾದ ದುರ್ದೈವಿ ಬಾಲಕಿ.

ಶಾಲಿನಿ ಪಿಯುಸಿ ಓದುತ್ತಿದ್ದ ಸಂದರ್ಭ ಪಕ್ಕದ ಗ್ರಾಮದ ದಲಿತ ಯುವಕ ಮಂಜು ಎಂಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಮನೆಯವರು 'ನೀನು ಅಪ್ರಾಪ್ತೆ ಈ ಪ್ರೀತಿ-ಗೀತಿ ಎಲ್ಲಾ ಬೇಡ' ಎಂದು ಹೇಳಿದರೂ ಆಕೆ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಇದೇ ವೇಳೆ ಶಾಲಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ತಂದೆ ಸುರೇಶ್ ಮತ್ತು ಪ್ರೇಮಿ ಮಂಜು ನಡುವೆ ಗಲಾಟೆ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. 

ಈ ಬಗ್ಗೆ ಶಾಲಿನಿಯಿಂದ ದೂರು ಕೊಡಿಸಲು ಮುಂದಾಗಿದ್ದಾರೆ. ಆಗ ಉಲ್ಟಾ ಹೊಡೆದ ಆಕೆ ತಂದೆ – ತಾಯಿ ತನಗೆ ತೊಂದರೆ ನೀಡುತ್ತಿದ್ದಾರೆ ಎಂದು ಪೊಲೀಸ್ ದೂರು ನೀಡಿದ್ದಾಳೆ.‌ ಈ ಬಗ್ಗೆ ಸಿಡಿಪಿಒ ಕಚೇರಿಯಲ್ಲಿ ಕೌನ್ಸಿಲಿಂಗ್ ನಡೆಸಿ ತಾನು ತಂದೆ ತಾಯಿಯೊಂದಿಗೆ ಹೋಗುವುದಿಲ್ಲ ತಿಳಿಸಿದ್ದಳು. ಇದರಿಂದ ಅಧಿಕಾರಿಗಳು ಯುವತಿಯನ್ನು ಮೈಸೂರಿನ ಬಾಲ ಮಂದಿರಕ್ಕೆ ಕಳುಹಿಸಿದ್ದರು.

ಕಳೆದ ಮೇ.18 ರಂದು ತಂದೆ ತಾಯಿ ಬಾಲಮಂದಿರಕ್ಕೆ ಹೋಗಿ ಪುತ್ರಿಯ ಮನವೊಲಿಸಿ ಒಪ್ಪಿಗೆ ಪತ್ರ ಬರೆದುಕೊಟ್ಟು ಮನೆಗೆ ಕರೆದುಕೊಂಡು ಬಂದಿದ್ದರು. ಬಂದ ಬಳಿಕ ಪ್ರಿಯಕರ ಮಂಜುವಿನೊಂದೊಗೆ ಹೋಗದಂತೆ  ಬುದ್ಧಿವಾದ ಹೇಳಿದ್ದಾರೆ. ಆದರೂ ಕೇಳದ ಶಾಲಿನಿ ಸಾಮಾಜಿಕ ಜಾಲತಾಣದ ಮೂಲಕ ಹುಡುಗನಿಗೆ ಮೇಸೇಜ್ ಮಾಡಿ ಸಂಪರ್ಕದಲ್ಲಿ ಇದ್ದಳು. ಆದರೆ ಜೂ.6 ರಂದು ರಾತ್ರಿ ಮಂಜು ಮನೆಗೆ ಹೋಗುವುದಾಗಿ ಬಾಗಿಲು ತೆಗೆದು ಆಕೆ ಹೋಗುತ್ತಿದ್ದ ಸಂದರ್ಭ ತಂದೆ ಸುರೇಶ್‌ ಮಗಳನ್ನು ತಡೆಯಲು ಯತ್ನಿಸಿದ್ದಾರೆ. ಹಠ ಹಿಡಿದ ಮಗಳು ತಂದೆಯ ಮಾತನ್ನು ಕೇಳದೇ ಮುಂದೆ ಹೋಗಲು ಹೆಜ್ಜೆಯಿಟ್ಟಿದ್ದಾಳೆ. ಆಗ ಕೋಪಗೊಂಡ ಸುರೇಶ್‌ ಕತ್ತು ಹಿಸುಕಿದ್ದಾರೆ. ಪರಿಣಾಮ ಆಕೆ ಶಾಲಿನಿ ಮೃತಪಟ್ಟಿದ್ದಾಳೆ. ಮರುದಿನ ಬೆಳಗ್ಗೆ ತಂದೆ ಸುರೇಶ್ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

Ads on article

Advertise in articles 1

advertising articles 2

Advertise under the article