-->
ಮಂಗಳೂರು: ಭಾರತದಲ್ಲಿ ಮಾರ್ಕ್, ಮಾರ್ಕ್ಸ್‌ವಾದಿ ಶಿಕ್ಷಣ ದೊರೆಯಲು ಕಾಂಗ್ರೆಸ್ - ಕಮ್ಯುನಿಸ್ಟ್ - ಕನ್ ವರ್ಷನ್ ಮಾಫಿಯಾ ಕಾರಣ: ಸಿ.ಟಿ.ರವಿ

ಮಂಗಳೂರು: ಭಾರತದಲ್ಲಿ ಮಾರ್ಕ್, ಮಾರ್ಕ್ಸ್‌ವಾದಿ ಶಿಕ್ಷಣ ದೊರೆಯಲು ಕಾಂಗ್ರೆಸ್ - ಕಮ್ಯುನಿಸ್ಟ್ - ಕನ್ ವರ್ಷನ್ ಮಾಫಿಯಾ ಕಾರಣ: ಸಿ.ಟಿ.ರವಿ

ಮಂಗಳೂರು: ಭಾರತದಲ್ಲಿ ಮಾರ್ಕ್ ಹಾಗೂ ಮಾರ್ಕ್ಸ್ ಶಿಕ್ಷಣ ಸಿಗುತ್ತಿದೆ. ಒಂದು ಪರೀಕ್ಷೆಯಲ್ಲಿ ಗಳಿಸಿರುವ ಅಂಕ ಮತ್ತೊಂದು ಮಾರ್ಕ್ಸ್‌ವಾದಿ ಶಿಕ್ಷಣ. ಇಂತಹ ಶಿಕ್ಷಣ ಸಿಗಲು ಕಾಂಗ್ರೆಸ್ - ಕಮ್ಯುನಿಸ್ಟ್ - ಕನ್ ವರ್ಷನ್ ಮಾಫಿಯಾ ಎಂಬ  ಸಿ ಕ್ಯೂಬ್ ಕಾರಣ. ಈ ಮೂರು ಸೇರಿ ಭಾರತದ ಪೂರ್ವಜರ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಶಿಕ್ಷಣದಲ್ಲಿ ಸೇರ್ಪಡೆಗೊಳಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. 

ಸಿಟಿಜನ್ಸ್ ಕೌನ್ಸಿಲ್ ವತಿಯಿಂದ ನಗರದ ಸಂಘನಿಕೇತನದಲ್ಲಿ ನಡೆದ ಪಠ್ಯರಾಜಕಾರಣ ಸತ್ಯ-ಮಿಥ್ಯ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ಈ ಪಠ್ಯ ರಾಜಕಾರಣವು ಭಾರತೀಕರಣ V/S ತುಕುಡೇ ಗ್ಯಾಂಗ್ ನಡುವಿನ ಹೋರಾಟವಾಗಿದೆ. ಪಠ್ಯರಾಜಕಾರಣ ರಾಷ್ಟ್ರೀಯವಾದವನ್ನು ದುರ್ಬಲಗೊಳಿಸುವ ಸಂಚಿನ ಭಾಗ. ತುಕುಡೆ ಗ್ಯಾಂಗ್ ನವರು ಪೊಳ್ಳು ವಿತಂಡವಾದವನ್ನಿಟ್ಟುಕೊಂಡು ಪರಾವಲಂಬಿ ಜೀವಿಗಳಾಗಿ ಬದುಕಿಕೊಂಡಿದ್ದರು‌. ಇದೀಗ ಅದಕ್ಕೂ ಕತ್ತರಿ ಬಿತ್ತು ಎನ್ನುವ ಕಾರಣಕ್ಕೆ ಈ ವಿವಾದ ಎಬ್ಬಿಸಿದ್ದಾರೆ ಎಂದು ಅವರು ಆರೋಪಿಸಿದರು.


ಬಿಜೆಪಿಯು ಶಿಕ್ಷಣದಲ್ಲಿ ತಪ್ಪಿರುವುದನ್ನು ಸರಿಪಡಿಸಿದರೆ ಕೇಸರಿಕರಣ ಎನ್ನುತ್ತಾರೆ. ನಮ್ಮಲ್ಲಿ ಬಹಳಯ ವೀರರಿದ್ದಾರೆ. ಅವರ ಬಗ್ಗೆ ನಮ್ಮವರಿಗೆ ತಿಳಿಸುವ ಬದಲು ದೇಶದ ಮೇಲೆ ಆಕ್ರಮಣ ಮಾಡಿದವರನ್ನು ಗ್ರೇಟ್ ಎಂದು ಹೇಳಲಾಗುತ್ತಿದೆ. ಅಂತಹದ್ದನ್ನು ಸರಿಪಡಿಸಲು ಹೋದ ನಾವುಗಳು ಕೋಮುವಾದಿಗಳಾಗುತ್ತಿದ್ದೇವೆ. ಪಠ್ಯದಲ್ಲಿ ದೇಶದ ಮೇಲೆ ದಾಳಿ ನಡೆಸಿದವರ ವಿಚಾರವಿದೆ. ಆದರೆ ರಾಮಾಯಣ - ಮಹಾಭಾರತಗಳ ಬಗ್ಗೆ ವಿಚಾರವಿಲ್ಲ. ನಾವು ಭಾರತೀಯತೆಯ ಬಗ್ಗೆ ಹೇಳಲಿದ್ದೇವೆ. ಭಾರತೀಯತೆ ಎದ್ದು ನಿಂತರೆ ಭಾರತ ಜಗತ್ತಿನ ಗುರು ಆಗುತ್ತೆದೆ ಅದಕ್ಕೆ ಇವರು ಈ ರೀತಿ ಬೊಬ್ಬೆ ಹಾಕುತ್ತಿದ್ದಾರೆ ಎಂದು ಹೇಳಿದರು.

ಇಸ್ಲಾಂ, ಕ್ರೈಸ್ತರು ಕಾಲಿಟ್ಟಲ್ಲಿ ಸಂಘರ್ಷವಾಗಿದೆ. ಇಸ್ಲಾಂ ಹೆಸರಲ್ಲಿ ಭಯೋತ್ಪಾದನೆ ಆಗ್ತಿದೆ. ಜಗತ್ತಿನ ಎಲ್ಲಾ ಧರ್ಮಗಳು ಶಾಂತಿ ಸಾರುತ್ತದೆ ಎಂಬುದು ಒಂದು ಸುಳ್ಳು. ಹಾಗೆ ಶಾಂತಿ ಸಾರಿದರು ಬಾಂಬ್ ಯಾಕೆ ದಾಳಿ ಮಾಡ್ತಾರೆ. ಒಬ್ಬನೇ ದೇವರು ಒಬ್ಬನೇ ಪ್ರವಾದಿ ಎನ್ನುವನವರು ಯಾಕೆ ಒಬ್ಬರ ಮೇಲೆ ಒಬ್ಬರು ಬಾಂಬ್ ಹಾಕ್ತಿದ್ದಾರೆ‌. ಇವರು ನಿಜವಾದ ಭಯೋತ್ಪಾದಕರು. ನಾವು ಪಠ್ಯದಲ್ಲಿ ಅಲ್ಪ ಪ್ರಮಾಣದ ಪರಿಷ್ಕರಣೆ ಮಾಡಿದ್ದೇವೆ. ಅಷ್ಟರಲ್ಲೇ ಇವರಿಗೆ ಉರಿ ಶುರು ಆಗಿದೆ ಅಂದರೆ ಇನ್ನೂ ಪೂರ್ತಿ ಪರಿಷ್ಕರಣೆ ಮಾಡಿದರೆ ಏನಾಗಬಹುದು ಎಂದು ಸಿ.ಟಿ.ರವಿ ಪ್ರಶ್ನಿಸಿದರು.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article