ಮಂಗಳೂರು: ರೌಡಿಶೀಟರ್ ಹತ್ಯೆಗೆ ಸಂಚು ರೂಪಿಸಿರುವ ಪ್ರಮುಖ ಆರೋಪಿ ಅಂದರ್!

ಮಂಗಳೂರು: ನಗರದ ಬೈಕಂಪಾಡಿಯ ಮೀನಕಳಿಯ ಎಂಬಲ್ಲಿ ರೌಡಿಶೀಟರ್ ರಾಜಾ ಅಲಿಯಾಸ್ ರಾಘವೇಂದ್ರನ ಹತ್ಯೆಗೈಯಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚು ರೂಪಿಸಿರುವ ಪ್ರಮುಖ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.


ನಗರದ ಬೈಕಂಪಾಡಿಯ ಮೀನಕಳಿಯ ನಿವಾಸಿ ರೌಡಿಶೀಟರ್ ನವೀನ್ ಅಲಿಯಾಸ್ ಮೈಕಲ್ ನವೀನ್ ಬಂಧಿತ ಆರೋಪಿ.

ನಗರದ ಬೈಕಂಪಾಡಿಯ ಮೀನಕಳಿಯ ರಸ್ತೆ ಬದಿಯಲ್ಲಿ ಜೂನ್ 6ರಂದು ರೌಡಿಶೀಟರ್ ರಾಜಾ ಅಲಿಯಾಸ್ ರಾಘವೇಂದ್ರನನ್ನು ಮಾರಕಾಯುಧಗಳಿಂದ ದಾಳಿ‌ ನಡೆಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.  


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೈದಿರುವ ಆರೋಪಿಗಳು ಸೇರಿದಂತೆ ಹಲವು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 


ಇದೀಗ ಕೊಲೆಗೆ ಸಂಚು ರೂಪಿಸಿದ್ದ, ಕೊಲೆ ಪ್ರಕರಣದ ರೂವಾರಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ನವೀನ್ ನನ್ನು ಪೊಲೀಸರು ಬಂಧಿಸಿದ್ದಾರೆ. 


ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈತನ ಮೇಲೆ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 8 ಕ್ರಿಮಿನಲ್ ಪ್ರಕರಣ ದಾಖಲಾಗಿದೆ.