ಕೆನಾಡದ ಪಾರ್ಲಿಮೆಂಟ್ ನಲ್ಲಿ ಮೊಳಗಿದ ಕನ್ನಡ: ವೀಡಿಯೋ ನೋಡಿ
Friday, May 20, 2022
ಮಂಗಳೂರು: ನಾಡಿನೆಲ್ಲೆಡೆ ಕನ್ನಡ ಉಳಿಸಬೇಕು, ಬೆಳೆಸಬೇಕೆಂದು ದನಿ ಕೇಳುತ್ತಲೇ ಇದೆ. ಇದೀಗ ದೂರದ ಕೆನಡಾದ ಪಾರ್ಲಿಮೆಂಟ್ ನಲ್ಲಿಯೂ ಕನ್ನಡದ ದನಿಯೊಂದು ಮೊಳಗಿದೆ. ಇದರ ವೀಡಿಯೋ ತುಣುಕೊಂದು ಈಗ ವೈರಲ್ ಆಗಿದೆ.
ಹೌದು... ವಿದೇಶಿ ನೆಲದ ಪಾರ್ಲಿಮೆಂಟ್ ನಲ್ಲಿ ಕನ್ನಡ ಭಾಷೆಯೊಂದು ಕೇಳಿಸಿದೆಯೆಂದರೆ ಇದು ಅಚ್ಚರಿಯೇ ಸರಿ. ಕೆನಡಾದ ಒಟ್ಟಾವೊದ ಸಂಸದ ಚಂದ್ರ ಆರ್ಯ ಕೆನಡಾದ ಪಾರ್ಲಿಮೆಂಟ್ ನಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ. 59 ಸೆಕೆಂಡ್ ನ ಈ ವೀಡಿಯೋ ತುಣುಕು ಈಗ ವೈರಲ್ ಆಗಿದೆ.
"ಮಾನ್ಯ ಸಭಾಪತಿ ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ದೊರಕಿರುವುದಕ್ಕೆ ಸಂತೋಷವಾಗುತ್ತಿದೆ" ಎಂದು ಹೇಳಿ ಮಾತು ಆರಂಭಿಸಿರುವ ಚಂದ್ರ ಆರ್ಯ ಅವರು, ಕನ್ನಡಿಗನೊಬ್ಬ ಕೆನಡದಾ ಸಂಸತ್ತಿನಲ್ಲಿ ತನ್ನ ಮಾತೃಭಾಷೆಯಲ್ಲಿ ಮಾತನಾಡುತ್ತಿರುವುದು ಸುಮಾರು 5ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ ಎಂದಿದ್ದಾರೆ. ಕೊನೆಗೆ ಕುವೆಂಪು ಅವರ 'ಎಂದಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡಿಗನಾಗಿರು' ಎಂಬ ಸಾಲನ್ನು ಹೇಳಿದ್ದಾರೆ. ನಿಜವಾಗಿಯೂ ಕನ್ನಡಿಗನೊಬ್ಬ ಕೆನಡಾದ ಪಾರ್ಲಿಮೆಂಟ್ ಸದಸ್ಯನಾಗಿರೋದು ಕನ್ನಡಿಗರಿಗೆ ಹೆಮ್ಮೆಯೇ ಸರಿ.