-->
'ಬೆಂಕಿಕಡ್ಡಿ ಗೀರದಿರಿ, ಮನೆಯೊಳಗೆ ಅಪಾಯಕಾರಿ ಗ್ಯಾಸ್ ತುಂಬಿದೆ' ಎಂದು ಡೆತ್ ನೋಟ್ ಬರೆದಿಟ್ಟು ತಾಯಿ - ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಶರಣು!

'ಬೆಂಕಿಕಡ್ಡಿ ಗೀರದಿರಿ, ಮನೆಯೊಳಗೆ ಅಪಾಯಕಾರಿ ಗ್ಯಾಸ್ ತುಂಬಿದೆ' ಎಂದು ಡೆತ್ ನೋಟ್ ಬರೆದಿಟ್ಟು ತಾಯಿ - ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಶರಣು!

ಹೊಸದಿಲ್ಲಿ: ತಾಯಿ ಹಾಗೂ ಪುತ್ರಿಯರಿಬ್ಬರು ಭಯಾನಕ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ವಸಂತವಿಹಾರದಲ್ಲಿ ನಡೆದಿದೆ. ಇವರು ಸಾವನ್ನು ತಂದುಕೊಂಡ ರೀತಿ ಮಾತ್ರ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ.

ಹೊಸದಿಲ್ಲಿಯ ವಸಂತವಿಹಾರದ ಫ್ಲ್ಯಾಟ್ ಒಂದರಲ್ಲಿ ಈ ದುರ್ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಈ ಮೂವರು ತಮ್ಮ ಫ್ಲ್ಯಾಟ್ ಬಾಗಿಲು ಮುಚ್ಚಿದ್ದಾರೆ. ಆ ಬಳಿಕ ಯಾವುದೇ ರೀತಿಯಲ್ಲಿ ಹೊರಗಿನ ಸಂಪರ್ಕಗಳಿಲ್ಲದೆ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಸೀಲ್ ಮಾಡಿ ಅಡುಗೆ ಅನಿಲ ತೆರೆದು ಹಾಗೆ ಬಿಟ್ಟಿದ್ದಾರೆ. ಈ ಮೂಲಕ ವಿಷಾನಿಲವು ಹೊರಗೆ ಹೋಗದೆ ಉಸಿರುಗಟ್ಟಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.


ಮಂಜು ಎಂಬ ಮಹಿಳೆ ಅಂಶಿಕಾ ಹಾಗೂ ಅಂಕು ಎಂಬ ತಮ್ಮ ಇಬ್ಬರು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜು ಪತಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಅಂದಿನಿಂದ ಈ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಆದ್ದರಿಂದ ಈ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೂರು ದಿನಗಳಾದರೂ ಇವರ ಮನೆಯಲ್ಲಿ ಬಾಗಿಲು ತೆರೆಯದಿರುವುದನ್ನು ಕಂಡು ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದ ಸಂದರ್ಭ ಈ ಕೃತ್ಯ ಬೆಳಕಿಗೆ ಬಂದಿದೆ. ಬಾಗಿಲು ತೆರೆದಾಕ್ಷಣ ಪೊಲೀಸರಿಗೆ ಡೆತ್ ನೋಟ್ ದೊರಕಿದೆ. ಅದರಲ್ಲಿ ಬರೆದಿರುವುನ್ನು ಕಂಡು ಪೊಲೀಸರೇ ಒಮ್ಮೆ ಬೆಚ್ಚಿ ಬಿದ್ದಿದ್ದಾರೆ.

ಸಾವಿಗೆ ಕಾರಣ ಬರೆಯದ ಈ ಡೆತ್ ನೋಟ್ ನಲ್ಲಿ, 'ದಯವಿಟ್ಟು ಬಾಗಿಲು ತೆರೆದವರು ಬೆಂಕಿಕಡ್ಡಿ ಗೀರದಿರಿ, ಮನೆಯೊಳಗೆ ಅಪಾಯಕಾರಿ ಗ್ಯಾಸ್ ತುಂಬಿದೆ' ಎಂದಷ್ಟೇ ಬರೆದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಬಳಿಕವಷ್ಟೇ ಆತ್ಮಹತ್ಯೆಗೆ ಕಾರಣ ತಿಳಿಯಬಹುದು.

Ads on article

Advertise in articles 1

advertising articles 2

Advertise under the article