-->
ತಾಯಿಯ ಪ್ರಿಯಕರನ ಮರ್ಮಾಂಗವನ್ನೇ ತುಂಡರಿಸಿದ ಪುತ್ರಿ!

ತಾಯಿಯ ಪ್ರಿಯಕರನ ಮರ್ಮಾಂಗವನ್ನೇ ತುಂಡರಿಸಿದ ಪುತ್ರಿ!

ಗುಂಟೂರು (ಆಂಧ್ರಪ್ರದೇಶ): ತಾಯಿ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದರಿಂದ ಕುಪಿತಗೊಂಡ ಪುತ್ರಿ ತಾಯಿಯ ಪ್ರೇಮಿಯ ಮರ್ಮಾಂಗವನ್ನೇ ತುಂಡರಿಸಿದ ಘಟನೆ​ ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ತುಮ್ಮಲಪಾಲಂನಲ್ಲಿ ನಡೆದಿದೆ.

ಇದೀಗ ರಾಮಚಂದ್ರ ರೆಡ್ಡಿ ಎಂಬಾತ ತನ್ನ ಮರ್ಮಾಂಗವನ್ನೇ ಕಟ್ ಮಾಡಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾಮಚಂದ್ರ ರೆಡ್ಡಿ 2 ವರ್ಷಗಳ ಹಿಂದೆ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ವಾಸಿಸುತ್ತಿದ್ದ ಈ ಸಂದರ್ಭ ಇಲ್ಲಿನ ಐತಾನಗರದ ಮಹಿಳೆಯನ್ನು ಆತ ಪರಿಚಯ ಮಾಡಿಕೊಂಡಿದ್ದ. ರೈಲ್ವು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಆತನಿಗೆ ಈ ಮಹಿಳೆಯ ಪರಿಚಯವಾಗಿತ್ತು. ಪರಿಚಯ ಇಬ್ಬರ ನಡುವೆ ಪ್ರೇಮಕ್ಕೆ ತಿರುಗಿತ್ತು‌. ಅದು ದೈಹಿಕ ಸಂಪರ್ಕದವರೆಗೂ ಹೋಗಿತ್ತು. ಇಬ್ಬರೂ ಮದ್ಯ ಸೇವಿಸಿ ಲವ್ವಿ - ಡವ್ವೀ ಶುರು ಹಚ್ಚಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಆದರೆ ಮಹಿಳೆಗೆ ಈಗಾಗಲೇ ಮದುವೆಯಾಗಿ ಪುತ್ರಿ ಇದ್ದಳು. ಈ ಮಗಳಿಗೆ ತನ್ನ ತಾಯಿ ಈ ರೀತಿ ಅಕ್ರಮ ಸಂಬಂಧ ಹೊಂದಿರುವುದು ಇಷ್ಟವಿರಲಿಲ್ಲ. ಪದೇ ಪದೇ ಈ ವಿಚಾರವಾಗಿಯೇ ತಾಯಿ-ಮಗಳ ನಡುವೆ ಜಗಳವಾಗುತ್ತಿತ್ತು. ಆದರೆ ತಾಯಿ ಮಾತ್ರ ಪ್ರಿಯಕರನ ಸ್ನೇಹವನ್ನು  ತೊರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ಹಾಗೂ ಆಕೆಯ ಪ್ರಿಯಕರ ಗಾಢ ನಿದ್ದೆಯಲ್ಲಿದ್ದಾಗ ಪುತ್ರಿ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ನೋವಿನಿಂದ ಚೀರಾಡುತ್ತಿದ್ದ ರಾಮಚಂದ್ರ ರೆಡ್ಡಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದುದರಿಂದ ಬೇರೊಂದು ಕಡೆ ಸ್ಥಳಾಂತರಿಸಲಾಗಿದೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article