
Mangalore Police Send-off : ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ- ಆಯುಕ್ತರ ಕಚೇರಿಯಲ್ಲಿ ಸ್ನೇಹಕೂಟ (Video)
5/01/2022 06:16:00 AM
ಪೊಲೀಸ್ ಅಧಿಕಾರಿಗಳಿಗೆ ಬೀಳ್ಕೊಡುಗೆ- ಆಯುಕ್ತರ ಕಚೇರಿಯಲ್ಲಿ ಸ್ನೇಹಕೂಟ
- ಮಂಗಳೂರು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬೇರೆ ಬೇರೆ ಸ್ಟೇಷನ್‌ಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ವರ್ಗಾವಣೆ ಆಗುತ್ತಿರುವ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನಿವಾಸದಲ್ಲಿ ಈ ಸರಳ ಕಾರ್ಯಕ್ರಮ ನಡೆಯಿತು.
ಅಧಿಕಾರಿಗಳಾದ ಅಶೋಕ್ ಪಿ, ಲೋಕೇಶ್ ಎ.ಸಿ, ಗುರುದತ್ ಕಾಮತ್, ರೇವತಿ ಎನ್, ಜ್ಯೋತಿರ್ಲಿಂಗ ಹೊನಕಟ್ಟಿ ಅವರನ್ನು ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್, ಡಿಸಿಪಿಗಳಾದ ಬಿ.ಪಿ ದಿನೇಶ್ ಕುಮಾರ್, ಹರಿರಾಂ ಶಂಕರ್, ಚೆನ್ನವೀರಪ್ಪ ಹಡಪದ್, ಎಸಿಪಿಗಳಾದ ರವೀಶ್ ನಾಯಕ್, ಮುರುಗೆಪ್ಪ ಉಪಾಸೆ, ದಿನಕರ ಶೆಟ್ಟಿ, ಎಂ.ಎ ನಟರಾಜ್ ಪಾಲ್ಗೊಂಡಿದ್ದರು.