-->
ನಾವೇ ಹೆತ್ತ ತಂದೆ - ತಾಯಿ ಎಂದ ವೃದ್ಧ ದಂಪತಿ ವಿರುದ್ಧ ನೋಟಿಸ್ ಜಾರಿಗೊಳಿಸಿದ ನಟ ಧನುಷ್

ನಾವೇ ಹೆತ್ತ ತಂದೆ - ತಾಯಿ ಎಂದ ವೃದ್ಧ ದಂಪತಿ ವಿರುದ್ಧ ನೋಟಿಸ್ ಜಾರಿಗೊಳಿಸಿದ ನಟ ಧನುಷ್

ಚೆನ್ನೈ: ನಾವೇ ಹೆತ್ತ ತಂದೆ - ತಾಯಿ ಎಂದು ಹೇಳಿರುವ ವೃದ್ಧ ದಂಪತಿಯ ವಿರುದ್ಧ ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಕಾನೂನು ಸಮರ ಸಾರಿದ್ದಾರೆ. ನಟ ಧನುಷ್​ ಅವರು ತಮ್ಮ ಪುತ್ರನೆಂದು ಹೇಳಿಕೊಂಡು ಹೆಲವು ವರ್ಷಗಳಿಂದ ಸುದ್ದಿಯಲ್ಲಿರುವ ದಂಪತಿಗೆ ಕೊನೆಗೂ ಕಾನೂನು ರೀತಿಯಲ್ಲೇ ಅವರು ನೊಟೀಸ್​ ನೀಡಿದ್ದಾರೆ. 

ನಾವು ಧನುಷ್​ ಅವರ ಜೈವಿಕ ತಂದೆ-ತಾಯಿ ಎಂದು ಹೇಳಿಕೊಂಡು ಈ ವೃದ್ಧ ದಂಪತಿ ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದರು. ಇದೀಗ ಕಾನೂನು ರೀತಿಯಲ್ಲೇ ಉತ್ತರಿಸಲು ನಟ ಧನುಷ್​​ ಮುಂದಾಗಿದ್ದಾರೆ. ಮಧುರೈನ ಈ ದಂಪತಿಗೆ ತಮ್ಮ ವಕೀಲರ ಮೂಲಕ ನೊಟೀಸ್​​ ಧನುಷ್ ನೀಡಿದ್ದಾರೆ. 

"ತನ್ನನ್ನು ತಮ್ಮ ಪುತ್ರನೆಂದು ಸುಳ್ಳು ಹೇಳಿಕೆ ನೀಡಿ ತಮ್ಮ ವರ್ಚಸ್ಸಿನ ಮೇಲೆ ಧಕ್ಕೆ ಬರುವಂತೆ ಈ ದಂಪತಿ ನಡೆದುಕೊಂಡಿದ್ದಾರೆ. ಇವರ ಹೇಳಿಕೆ ಸುಳ್ಳಾಗಿದ್ದು, ತಮ್ಮ ಕಕ್ಷಿದಾರನಿಗೆ 10 ಕೋಟಿ ರೂ. ಪರಿಹಾರ ನೀಡಬೇಕೆಂದು" ನಟ ಧನುಷ್ ಪರ ವಕೀಲ ಹೇಳಿದ್ದಾರೆ. 

''ತಮ್ಮ ವಿರುದ್ಧ ಮಾಡಿರುವ ಗುರುತರವಾದ ಆರೋಪವನ್ನು ಸಹಿಸಲಸಾಧ್ಯ. ಇಂತಹ ಆರೋಪದಿಂದ ಈ ದಂಪತಿ ಸುಮ್ಮನಾಗುತ್ತಾರೆ ಎಂದು ಭಾವಿಸಿದ್ದೆ. ಆದರೆ ಆವರ ಸುಳ್ಳು ಹೇಳಿಕೆಗಳು ಮುಂದುವರಿದಿದ್ದರಿಂದ ಕಾನೂನು ಸಮರ ಸಾರಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಸುಳ್ಳು , ಅಸಮರ್ಥನೀಯ ಮತ್ತು ಮಾನಹಾನಿ ಆರೋಪಗಳನ್ನು ಮಾಡಿದ ನಿಮ್ಮಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ದಂಪತಿಗೆ ನೊಟೀಸ್​​​ ನೀಡಲಾಗಿದೆ. 

Ads on article

Advertise in articles 1

advertising articles 2

Advertise under the article