-->

100 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಆಟವಾಡುತ್ತಿದ್ದ ಆರರ ಬಾಲಕ: ಎನ್ ಡಿಆರ್ ಎಫ್ ನಿಂದ ರಕ್ಷಣಾ ಕಾರ್ಯಾಚರಣೆ ಚುರುಕು

100 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಆಟವಾಡುತ್ತಿದ್ದ ಆರರ ಬಾಲಕ: ಎನ್ ಡಿಆರ್ ಎಫ್ ನಿಂದ ರಕ್ಷಣಾ ಕಾರ್ಯಾಚರಣೆ ಚುರುಕು

ಪಂಜಾಬ್: ಕೊಳವೆ ಬಾವಿಗೆ ಮಕ್ಕಳು ಬೀಳುತ್ತಿರುವ ಪ್ರಕರಣ ಅನೇಕ ಕಡೆಗಳಲ್ಲಿ ನಡೆದಿದ್ದರೂ, ಜನರು ಮಾತ್ರ ಇನ್ನು ಎಚ್ಚೆತ್ತಿಲ್ಲ. ಕೊರೆದ ಕೊಳವೆ ಬಾವಿಯಲ್ಲಿ ನೀರು ದೊರೆಯದಿದ್ದರೆ ಮುಚ್ಚದೆ ಹಾಗೆ ಬಿಡುವ ಪರಿಣಾಮ ಸಾಕಷ್ಟು ಅನಾಹುತಗಳು ಸಂಭವಿಸಿದೆ‌. ಇದೀಗ ಅಂತಹದ್ದೇ ಘಟನೆಯೊಂದು ಚಂಡೀಗಢದಲ್ಲಿ ನಡೆದಿದೆ.

ಪಂಜಾಬ್ ನ ಹೋಶಿಪುರ್ ಜಿಲ್ಲೆಯ ಖೈಲಾ ಎಂಬ ಹಳ್ಳಿಯಲ್ಲಿ ಆಟವಾಡುತ್ತಿದ್ದ ಆರರ ಬಾಲಕನೋರ್ವನು ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ದೌಢಾಯಿದ್ದು, ಬಾಲಕನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಈ ಬಾಲಕ 100 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಬಾಲಕನಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದ್ದು, ಜೆಸಿಬಿ ಮೂಲಕ ರಂಧ್ರ ಕೊರೆಯುವ ಕೆಲಸ ಮಾಡಲಾಗುತ್ತಿದೆ. ಈತ ಬಯಲಿನಲ್ಲಿ‌ ಆಟವಾಡುತ್ತಿದ್ದ. ಈ ಸಂದರ್ಭ ನಾಯಿ ಅಟ್ಟಿಸಿಕೊಂಡು ಬಂದಿದೆ. ಬಾಲಕ ಓಡಲು ಆರಂಭಿಸಿ ಗಮನಿಸಿದೆ ತೆರೆದ ಕೊಳವೆ ಬಾವಿಯೊಳಗೆ ಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕ್ಯಾಮರಾದಲ್ಲಿ ಬಾಲಕ ಅಸ್ವಸ್ಥ ಸ್ಥಿತಿಯಲ್ಲಿ ಇರುವುದಾಗಿ ಕಂಡು ಬಂದಿದೆ. ಆತನನ್ನು ಕೊಳವೆ ಬಾವಿಯಿಂದ ಹೊರ ತೆಗೆಯುವ ಕಾರ್ಯವೂ ಚುರುಕುಗೊಂಡಿದೆ. ಕಾರ್ಯಾಚರಣೆಯನ್ನು ಶೀಘ್ರ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article