-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Navami Resto in Mangaluru- ಮಂಗಳೂರು: ಮಂಗಳಾದೇವಿಯಲ್ಲಿ ನವಮಿ ಗ್ರೂಪ್‌ನ 'ನವಮಿ ವೆಜ್ ರೆಸ್ಟೋ' ಶುಭಾರಂಭ

Navami Resto in Mangaluru- ಮಂಗಳೂರು: ಮಂಗಳಾದೇವಿಯಲ್ಲಿ ನವಮಿ ಗ್ರೂಪ್‌ನ 'ನವಮಿ ವೆಜ್ ರೆಸ್ಟೋ' ಶುಭಾರಂಭ

ಮಂಗಳೂರು: ಮಂಗಳಾದೇವಿಯಲ್ಲಿ ನವಮಿ ಗ್ರೂಪ್‌ನ 'ನವಮಿ ವೆಜ್ ರೆಸ್ಟೋ' ಶುಭಾರಂಭ





ಮಂಗಳೂರು: ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ರಥಬೀದಿಯಲ್ಲಿ ನವಮಿ ಸಮೂಹ ಸಂಸ್ಥೆಯ ನೂತನ ನವಮಿ ವೆಜ್ ರೆಸ್ಟೋ ಶುಭಾರಂಭಗೊಂಡಿತು.



ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿ, ನವಮಿ ಗ್ರೂಪ್ ಸಂಸ್ಥೆ ತನ್ನದೇ ಆದ ಬ್ರಾೃಂಡ್ ಹೊಂದಿರುವ ಇರುವ ಸಂಸ್ಥೆಯಾಗಿದ್ದು, ಈಗಾಗಲೇ ಮುಂಬೈ, ಮೂಡುಬಿದಿರೆ ಹೆಸರುವಾಸಿಯಾಗಿದೆ. ಅದೇ ರೀತಿ ಮಂಗಳೂರಿನಲ್ಲೂ ಬ್ರಾಂಡಿಂಗ್ ಆಗಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.



ಮಾಲೀಕರ ಇಚ್ಛಾಶಕ್ತಿಯಿಂದ ನವಮಿ ಸಂಸ್ಥೆಯ ಹತ್ತಾರು ಸಂಸ್ಥೆಗಳು ಇಂದು ಹಲವಡೆ ಆರಂಭವಾಗಿದ್ದು, ನವಮಿ ಗ್ರೂಪ್ ಹೋದಲ್ಲೆಲ್ಲ ಇತಿಹಾಸವನ್ನೆ ಸೃಷ್ಟಿಸಿದೆ ಎಂದರು.



ಶುಭ ಹಾರೈಸಿ ಆಶ್ರೀವದಿಸಿದ ಶ್ರೀ ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದಜೀ, ಮಂಗಳಾದೇವಿಗೆ ಪ್ರದೇಶಕ್ಕೆ ಇಂತಹ ರೆಸ್ಟೋರೆಂಟ್‌ನ ಅಗತ್ಯ ಇತ್ತು ಈ ಕುರಿತು ಹಿಂದೆ ನಾನು ಹಲವರ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಇಂದು ಉದ್ಘಾಟನೆ ಗೊಂಡ ರೆಸ್ಟೋರೆಂಟ್ ಜನ ಸಾಮಾನ್ಯರ ಮೆಚ್ಚುಗೆ ಪಡೆಯಲಿ ಎಂದರು.



ಮುಖ್ಯ ಅತಿಥಿಯಾಗಿದ್ದ ಶಾಸಕ ವೇದವ್ಯಾಸ ಕಾಮತ್, ಶ್ರೀಕೃಷ್ಣ ಬಟಾಟವಡ ಹೆಸರಿನಲ್ಲಿ ಮುಂಬೈನಲ್ಲಿ ಪ್ರಸಿದ್ಧಿ ಪಡೆದ ಸಂಸ್ಥೆ, ಇಂದು ಮಂಗಳಾದೇವಿ ಪರಿಸರಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದೆ.


ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡಬಿದ್ರೆಯ ಅಭಿವೃದ್ಧಿಗೆ ನಂದಕುಮಾರ್ ಕುಡ್ವರವರ ಕೊಡುಗೆ ಅಪಾರ ಎಂದು ಹೇಳಿದರು.


ಮೇಯರ್ ಪ್ರೇಮಾನಂದ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಂಗಳಾದೇವಿ ದೇವಸ್ಥಾನ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಉದ್ಯಮಿಗಳಾದ ಮೊಹಮ್ಮದ್ ಮುಕ್ತಾರ್, ಮೆಲ್ವಿನ್ ಎನ್.ಕರ್ನೇಲಿಯಾ, ಸಂಸ್ಥೆ ಮುಖ್ಯಸ್ಥ ನಂದಕುಮಾರ್ ಆರ್.ಕುಡ್ವ, ಸತ್ಯಪ್ರಕಾಶ್ ನಾಯಕ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article

ಸುರ