-->
ಮಂಗಳೂರಿನಲ್ಲಿ ರೌಡಿಶೀಟರ್ ನ ಅಟ್ಟಾಡಿಸಿ ಬರ್ಬರ ಹತ್ಯೆ!

ಮಂಗಳೂರಿನಲ್ಲಿ ರೌಡಿಶೀಟರ್ ನ ಅಟ್ಟಾಡಿಸಿ ಬರ್ಬರ ಹತ್ಯೆ!

ಮಂಗಳೂರು: ನಗರದ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ರೌಡಿಶೀಟರ್ ನನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಂಗಳೂರಿನ ಹೊಯಿಗೆಬಜಾರ್ ನಿವಾಸಿ ರಾಹುಲ್(26) ಎಂಬಾತ ಹತ್ಯೆಯಾದ ರೌಡಿಶೀಟರ್.

ಹತ್ಯೆಯಾಗಿದ್ದ ರಾಹುಲ್ ನಗರದ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ.  ರಾಹುಲ್ ನನ್ನು ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಎಮ್ಮೆಕೆರೆಯಲ್ಲಿ‌ ನಡೆಯುತ್ತಿದ್ದ ಕೋಳಿ ಅಂಕದ ಬಳಿ ನಾಲ್ವರು ಈತನ ತಲೆ,  ಕೈ, ಪಾದಗಳಿಗೆ ಮಾರಕಾಯುಧಗಳಿಂದ ದಾಳಿ ಎಸಗಿ ಹತ್ಯೆ ಮಾಡಿದ್ದಾರೆ.

ರಾಹುಲ್ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article